ಗೋಕಾಕನಲ್ಲಿ ಹಕ್ಕು ಚಲಾಯಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಗರದ ಕೆಬಿಎಸ್ ನಂ 3 ಶಾಲೆಯ ಮತಗಟ್ಟೆ ಸಂಖ್ಯೆ 131 ರಲ್ಲಿ ತಮ್ಮ ಮತವನ್ನು ಚಲಾಯಿಸಿದರು.

ಮತದನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ದೇಶದಲ್ಲಿ ಬಿಜೆಪಿ ಪರ ಅಲೆ ಇದ್ದು, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲಿದ್ದಾರೆ. 4ನೇ ಬಾರಿಗೆ ಸುರೇಶ ಅಂಗಡಿ ಸಂಸದರಾಗಿ ಆಯ್ಕೆಯಾಗುವುದು ಖಚಿತ. ಲೋಕಸಭಾ ಚುನಾವಣೆಯ ಪಲಿಂತಾಶದ ನಂತರ ಕೇಂದ್ರದಲ್ಲಿ ಬಲಿಷ್ಠವಾಗಿ ಎನ್‍ಡಿಎ ಸರ್ಕಾರ ರಚಿಸಲಿದ್ದು ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ. ಮೈತ್ರಿ ಸರ್ಕಾರ ಉರಳಲಿದೆ ಎಂದು ಒಗಟಿನಲ್ಲಿ ಹೇಳಿದರು.

Leave a Reply

Your email address will not be published.