ದೇಶದ ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ : ಶಾಸಕ ಹಿಟ್ನಾಳ

ಕೊಪ್ಪಳ: ದೇಶ ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶವನ್ನು ಕಾಂಗ್ರೆಸ್ ನೀಡಿದಂತೆ ಬಿಜೆಪಿ ನೀಡಿಲ್ಲ ಕೇವಲ ಮೋದಿ ದೊಡ್ಡ ಭರವಸೆಗಳನ್ನು ನೀಡಿ, ಅದರಲ್ಲಿ ಒಂದನ್ನೂ ಈಡೇರಿಸಿಲ್ಲವೆಂದು ಶಾಸಕ, ಸಂಸದೀಯ ಕಾರ್ಯದರ್ಶಿ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ಲೋಕಸಭಾ ಚುನಾವಣೆ ಪ್ರಚಾರ ನಿಮಿತ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಪರವಾಗಿ ಕೊಪ್ಪಳ ನಗರದ ವಿವಿಧ ವಾರ್ಡ್‌ಗಳಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಮತ್ತು ಮೈತ್ರಿ ಸರಕಾರಗಳ ಸಾಧನೆಗಳಿಂದ ಮೈತ್ರಿ ಅಭ್ಯರ್ಥಿಗೆಲುವು ಖಚಿತ ಎಂದರು.

ಜನರಿಗೆ ೧೬೫ ಭರವೆಗಳನ್ನು ಕೊಟ್ಟ ಕಾಂಗ್ರೆಸ್ ಸರಕಾರ ನಿರೀಕ್ಷೆಗೂ ಮೀರಿ ಈಡೇರಿಸಿವೆ, ಆದರೆ ಜನರಿಗೆ ಅವುಗಳನನ್ನು ತಿಳಿಸಲು ಹಿಂದೆ ಬಿದ್ದಿದ್ದು, ಈಗ ಜನರಿಗೇ ಅರಿವಾಗಿದೆ, ಮೋದಿಯ ಸುಳ್ಳಿನ ಭಾವನಾತ್ಮಕ ಮತ್ತು ಧರ್ಮ ಒಡೆಯುವ ಭಾಷಣದಿಂದ ಏನೂ ಆಗುವದಿಲ್ಲ, ಕಾಂಗ್ರೆಸ್ ಬೆಂಬಲಿಸಿದಲ್ಲಿ ಪ್ರತಿ ವರ್ಷ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ೭೨ ಸಾವಿರ ಕೊಡುವ ಭರವಸೆ ಜೊತೆಗೆ ಉದ್ಯೋಗ ಸೃಷ್ಟಿ ಮಾಡಲಾಗುವದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಮಾತನಾಡಿದರು, ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಬಿ. ನಾಗರಳ್ಳಿ, ಕುಡಾ ಮಾಜಿ ಅಧ್ಯಕ್ಷ ಜುಲ್ಲು ಖಾದರ್ ಖಾದ್ರಿ, ನಗರಸಭೆ ಸದಸ್ಯರುಗಳಾದ ಮಹೇಂದ್ರ ಛೋಪ್ರಾ, ಅಕ್ಬರ್ ಪಾಶಾ ಪಲ್ಟನ್, ಮುತ್ತುರಾಜ ಕುಷ್ಟಗಿ, ಸಿದ್ದು ಮ್ಯಾಗೇರಿ, ಗುರುಬಸವರಾಜ ಹಲಗೇರಿ, ಅಜೀಮ್ ಅತ್ತಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಭೂಮರಡ್ಡಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಶಾ, ಕೆಪಿಸಿಸಿ ಕಾರ್ಮಿಕ ರಾಜ್ಯ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಜಿಲ್ಲಾ ವಕ್ತಾರ ಕುರಗೋಡ ರವಿ ಯಾದವ್, ಇತರರು ಇದ್ದರು.

Leave a Reply

Your email address will not be published.