26 ರಂದು ವಾರಾಣಸಿಯಿಂದ ಮೋದಿ ನಾಮಪತ್ರ ಸಲ್ಲಿಕೆ

India’s Prime Minister Narendra Modi greets Myanmar’s State Counselor Aung San Suu Kyi before their meeting in the Presidential Palace in Naypyitaw, Myanmar September 6, 2017. REUTERS/Soe Zeya Tun

ವಾರಾಣಸಿ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭೆ ಕ್ಷೇತ್ರದಿಂದ ಮರು ಆಯ್ಕೆ ಕೋರಿ ಮುಂದಿನ ವಾರ ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ.

ಮೇ 26 ರಂದು ಮೋದಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ನಾಮಪತ್ರ ಸಲ್ಲಿವುದಕ್ಕಿಂತ ಮುನ್ನ ಮೋದಿ ಕ್ಷೇತ್ರವ್ಯಾಪ್ತಿಯಲ್ಲಿ ಎರಡು ರೋಡ್ ಶೋ ಗಳನ್ನು ನಡೆಸಲಿದ್ದು, ಅದಕ್ಕಾಗಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪೂರ್ವಸಿದ್ದತೆಯಲ್ಲಿ ತೊಡಗಿಕೊಂಡಿದ್ದಾರೆ.

ಏಪ್ರಿಲ್ 25 ರಂದು ವಾರಾಣಸಿಗೆ ಆಗಮಿಸಲಿರುವ ಮೋದಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ದಶಸ್ವಮೇಧ್ ಘಾಟ್ ವರೆಗೆ ರೋಡ್ ಶೋ ನಡೆಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ರೋಡ್ ಶೋ ನಂತರ ಅವರು ಕಾಳಭೈರವ ದೇವಸ್ಥಾನಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದ್ದು ನಂತರ ಗಂಗಾ ಆರತಿ ಕಾರ್ಯಕ್ರಮದಲ್ಲಿಯೂ ಭಾಗವಹಿಸುವರು.
ಮಾರನೇ ದಿನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಿಸಲಿರುವ ಮೋದಿ ನಂತರ ರೋಡ್ ಶೋ ದಲ್ಲಿ ಪಾಲ್ಗೊಂಡು ನಾಮಪತ್ರ ಸಲ್ಲಿಸುವರು.

Leave a Reply

Your email address will not be published.