ಅತೃಪ್ತ ಶಾಸಕರ ಮಾತು ಹೋಗಲಿ, ಕುಮಾರಸ್ವಾಮಿಯೇ ಬಿಜೆಪಿ ಸೇರಿದರೆ ಒಳ್ಳೆಯದಂತೆ..!

ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ರಾಜ್ಯದ ದೋಸ್ತಿ ಸರಕಾರ ಬಿದ್ದು ಹೋಗುತ್ತೆ, ಮತ್ತೊಂದು ಸುತ್ತಿನ ಆಪರೇಷನ್ ಕಮಲ ನಡೆಯುತ್ತೆ, ಜೆಡಿಎಸ್ -ಕಾಂಗ್ರೆಸ್ ಪಕ್ಷದ ಹಲವು ಅತೃಪ್ತ ಶಾಸಕರು ” ಕಮಲ ” ಪಾಳೆಯಕ್ಕೆಹೋಗುತ್ತಾರೆ ಎಂಬೆಲ್ಲ ಸುದ್ದಿಗಳು ಹರಿದಾಡುತ್ತಿರುವ ನಡುವೆಯೇ ಕೇಂದ್ರ ಸಚಿವರೊಬ್ಬರು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಗೆ ಬಂದರೆ ನೆಮ್ಮದಿಯಾಗಿರುತ್ತಾರೆ ಎಂಬ ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ್ದಾರೆ.

ಹೌದು, ಕೇಂದ್ರ ಸಚಿವ ಹಾಗೂ ಆರ್ ಪಿ ಐ ಮುಖಂಡ ರಾಮದಾಸ್ ಅಠಾವಳೆ ಅವರು ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿ, ಕುಮಾರಸ್ವಾಮಿ ಬಿಜೆಪಿ ಸೇರಿದರೆ ಒಳ್ಳೆಯದು. ಅವರು ಒಂದೊಮ್ಮೆ ಬಿಜೆಪಿಗೆ ಬಂದರೆ ಡಿಸಿಎಂ ಸ್ಥಾನ ಖಚಿತ, ಸಿಎಂ ಸ್ಥಾನಕ್ಕಿಂತ ಡಿಸಿಎಂ ಸ್ಥಾನದಲ್ಲಿಯೇ ಅವರು ನೆಮ್ಮದಿಯಾಗಿರಬಹುದು ಎಂದು ಹೇಳಿದರು.

ಚುನಾವಣೆ ನಂತರ ಕುಮಾರಸ್ವಾಮಿ ಅವರನ್ನು ಬಿಜೆಪಿಗೆ ಆಹ್ವಾನಿಸುವ ಕುರಿತಂತೆ ಚರ್ಚೆ ನಡೆಸಲಾಗುವುದೆಂದೂ ಅವರು ಹೇಳಿರುವುದು ರಾಜಕೀಯ ಚರ್ಚೆಗೆ ಒದಗಿಸಿಕೊಟ್ಟಿರುವುದಂತೂ ಸುಳ್ಳಲ್ಲ.

Leave a Reply

Your email address will not be published.