ಡಿಕೆಶಿ ಲೀಡರ್ ಅಲ್ಲ, ನಮ್ಮ ಲೆವಲ್ ಅಲ್ಲ ಅಂದ್ರು ರಮೇಶ ಜಾರಕಿಹೊಳಿ…!

ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಲೀಡರ್ ಅಲ್ಲ, ಆತ ನಮ್ಮ ಲೆವಲ್ ಅಲ್ಲ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಎರಡು ದಿನಗಳಿಂದ ನಡೆದಿರುವ ಮಿಂಚಿನ ರಾಜಕೀಯ ಬೆಳವಣಿಗೆಯಲ್ಲಿ ಇಂದೇ ರಾಜೀನಾಮೆ ನೀಡುವುದಾಗಿ ಹೇಳಿ, ಬೆಂಗಳೂರಿಗೆ ಧಾವಿಸಿರುವ ರಮೇಶ ಜಾರಕಿಹೊಳಿ, ನಮ್ಮ ಲೆವಲ್ ಗೆ ರಾಹುಲ್ ಗಾಂಧಿ ಜತೆಗೆ ಮಾತನಾಡುವುದಾಗಿ ಹೇಳಿದರು.

ಒಬ್ಬನೇ ರಾಜೀನಾಮೆ ನೀಡುವುದಾದರೆ ನೀಡಿಬಿಡುತ್ತಿದ್ದೆ. ಸ್ಪೀಕರ್ ಅವರ ಭೇಟಿಗೆ ಸಮಯಾವಕಾಶ ಕೋರಿದ್ದೆ. ಇಂದು ಮತ್ತು ನಾಳೆ ಅವರು ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ನಾಳೆ ಅಥವಾ ನಾಡಿದ್ದು ಎಲ್ಲರೂ ಸೇರಿ ರಾಜೀನಾಮೆ ಕೊಡುತ್ತೇವೆ ಎಂದು ಹೇಳಿದರು.ಸ್ವಲ್ಪ ದಿನ ಕಾಯಿರಿ ಒಳ್ಳೆಯ ಸುದ್ದಿ ಕೊಡುತ್ತೇನೆ ಎಂದರು. ಆದರೆ, ಯಾರೆಲ್ಲಾ ತಮ್ಮೊಂದಿಗೆ ರಾಜೀನಾಮೆ ನೀಡಲಿದ್ದಾರೆ ಎಂಬ ಅಂಶವನ್ನು ಮಾತ್ರ ಅವರು ಬಿಟ್ಟುಕೊಡಲಿಲ್ಲ.

Leave a Reply

Your email address will not be published.