ಬೆಳಗಾವಿಗೆ ಸುರೇಶ ಅಂಗಡಿ ಕೊಡುಗೆ ಶೂನ್ಯ: ಸಾಧುನವರ್


ಬೆಳಗಾವಿ: ಕಳೆದ 15 ವರ್ಷದಲ್ಲಿ ಸಂಸದ ಸುರೇಶ ಅಂಗಡಿ ಕೊಡುಗೆ ಶೂನ್ಯ ಎಂದು ಕಾಂಗ್ರೆಸ್ ಅಭ್ಯರ್ಥಿ ಸಾಧುನವರ್ ಆಪಾದಿಸಿದರು.

ಸವದತ್ತಿ ಪಟ್ಟಣದಲ್ಲಿ ಭರ್ಜರಿ ಮತಯಾಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಅಭಿವೃದ್ದಿಗೆ ಕಾಂಗ್ರೆಸ್ ಹಲವು ಕೊಡುಗೆ ನೀಡಿದೆ. ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗೆ, ಹೈಟೆಕ್ ಬಸ್ ನಿಲ್ದಾಣ ಸೇರಿ ವಿವಿಧ ಕಾಮಗಾರಿಗಳನ್ನು ಸಿದ್ದರಾಮಯ್ಯ ಕೊಡುಗೆ ನೀಡಿದ್ದಾರೆ. ಸಂಸದ ಸುರೇಶ ಅಂಗಡಿ ಮೂರು ಬಾರಿ ಕಾಲ ಹರಣ ಮಾಡಿದ್ದಾರೆ ಎಂದು ದೂರಿದರು.

ಸವದತ್ತಿ ಯಲ್ಲಮ್ಮ ದೇವಸ್ಥಾನ ಟ್ರಸ್ಟ ಅದ್ಯಕ್ಷ ರಾಮನಗೌಡಾ ತಿಪರಾಸಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ದೇಶದ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದರು ಒಂದೂ ಭರವಸೆಯನ್ನು ಈಡೇರಿಸದೇ ಸಿಲೆಂಡರ್,ಪೆಟ್ರೋಲ್,ಡಿಸೈಲ್ ಬೆಲೆ ಏರಿಸಿ ಬಡವರ ಬದುಕನ್ನು ಕಸಿದುಕೊಂಡರು. ರೈತರ ಸಾಲ ಮನ್ನಾ ಮಾಡದೇ ಅನ್ನದಾತನಿಗೆ ಮೋಸ ಮಾಡಿದ್ದು ನರೇಂದ್ರ ಮೋದಿ,ಎನ್ನುವದು ಎಲ್ಲರಿಗೂ ಗೊತ್ತಾಗಿದೆ ಮೋದಿ ಎಂದರೆ ಮೋಸ ಎನ್ನುವದು ಐದು ವರ್ಷದಲ್ಲಿ ಗೊತ್ತಾಗಿದ್ದು ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಮೋಸದಾಟ ನಡೆಯುವದಿಲ್ಲ ಎಂದರು.

ಕಾಂಗ್ರೆಸ್ ಮುಖಂಡ ರವೀಂದ್ರ ಯಲಿಗಾರ ಮಾತನಾಡಿದರು. ಕಾಂಗ್ರೆಸ ಮುಖಂಡರಾದ ವಿಶ್ವಾಸ ವೈದ್ಯ ಸೇರಿದಂತೆ ಸವದತ್ತಿ ತಾಲ್ಲೂಕಿ ಎಲ್ಲ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published.