ಬಾಂಬ್ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಾಧ್ವಿಗೆ ಬಿಜೆಪಿ ಟಿಕೆಟ್..!

ಭೋಪಾಲ: ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಮಾಲೇಗಾಂವ್ ಸ್ಪೋಟ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಇಂದು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.

ಇಂದು ಪಕ್ಷದ ಕಚೇರಿಯಲ್ಲಿ ಮಾತನಾಡಿ ನಾನೂ ಔಪಚಾರಿಕವಾಗಿ ಬಿಜೆಪಿಯನ್ನು ಸೇರಿಕೊಂಡಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಿಸಿ ಗೆಲ್ಲೆತ್ತೇನೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಭೋಪಾಲ ಲೋಕಸಭ್ ಕ್ಷೇತ್ರದಿಂದ ಸಾಧ್ವಿಗೆ ಕಾಂಗ್ರೆಸ್ಸಿನ್ ದಿಗ್ವಿಜಯ್ ಸಿಂಗ್ ವಿರುದ್ಧ ಕಣಕ್ಕಿಳಿಸಿದಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ.

2008 ರಲ್ಲಿ ಮಾಲೇಗಾಂವ್ ಬಾಂಬ್ ಸ್ಪೋಟ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸಾಧ್ವಿಗೆ ಇತ್ತಿಚೀಗೆಷ್ಟೆ ರಾಷ್ಟ್ರೀಯ್ ತನಿಖಾ ದಳ ಕ್ಲೀನ್ ಚೀಟ್ ನೀಡಿತ್ತು.

ಕೋಮು ಸೌಹಾರ್ದತೆ ಕೆರಳಿಸುವ ಹೇಳಿಕೆಗಳನ್ನು ನೀಡಿ ಹಲವು ಬಾರಿ ಕೋರ್ಟ್ ಮೆಟ್ಟಿಲು ಕೂಡ ಸಾಧ್ವಿ ಏರಿದ್ದಾರೆ.

Leave a Reply

Your email address will not be published.