ಗೋಕಾಕ ಕ್ಷೇತ್ರದಲ್ಲಿ ಸಚಿವ ಸತೀಶ, ಲಖನ್ ಜಾರಕಿಹೊಳಿ ಬಿರುಸಿನ ಜಂಟಿ ಪ್ರಚಾರ

ಗೋಕಾಕ: ಗೋಕಾಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಸಚಿವ ಸತೀಶ ಜಾರಕಿಹೊಳಿ ಮತ್ತು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.

ಇಲ್ಲಿನ ಕೊಳವಿ, ಬೆಣಚಿನಮರಡಿ, ಮಮದಾಪುರ ಉಪ್ಪಾರಟ್ಟಿ ಮಾಲದಿನ್ನಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಬೆಳಗಾವಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಡಾ. ವ್ಹ್, ಎಸ್. ಸಾಧುನವರ ಪರ ಮತಯಾಚಿಸಿದರು.

ಕಳೆದ್ 15 ವರ್ಷಗಳಿಂದ ಗೋಕಾಕ ಕ್ಷೇತ್ರದಲ್ಲಿ ಕೇಂದ್ರದ ಯಾವುದೇ ಯೋಜನೆಗಳನ್ನು ತರುವಲ್ಲಿ ಸುರೇಶ ಅಂಗಡಿ ವಿಫಲವಾಗಿದ್ದಾರೆ. ಗೋಕಾಕ ಕ್ಷೇತ್ರಕ್ಕೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ನೋಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಆರಿಸಿ ತರಬೇಕು ಎಂದು ಲಖನ್ ಜಾರಕಿಹೊಳಿ ವಿನಂತಿಸಿದರು.

Leave a Reply

Your email address will not be published.