ದೇಶದಲ್ಲಿ ಇತಿಹಾಸ ಸೃಷ್ಟಿಸಿದ ಯಮಕನಮರಡಿ ಕ್ಷೇತ್ರ: ಸಚಿವ ಸತೀಶ ಜಾರಕಿಹೊಳಿ ಬಣ್ಣನೆ

ಕ್ಷೇತ್ರಕ್ಕೆ ಕಾಲಿಡದೆ ಜಯ, ಇತಿಹಾಸ ಸೃಷ್ಠಿಗೆ ಮತದಾರರೇ ಕಾರಣ

ಬೆಳಗಾವಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರ ದೇಶದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದೆ ಅದಕ್ಕೆ ಮತದಾರರೇ ಕಾರಣ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಬಣ್ಣಿಸಿದರು.

ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಕಾಲಿಡದೆ ಕಾರ್ಯಕರ್ತರ ನೇತೃತ್ವದಲ್ಲಿಯೇ ಜಯಗಳಿಸಿದ್ದು, ಯಮಕನಮರಡಿ ಕ್ಷೇತ್ರ ಇತಿಹಾಸಕ್ಕೆ ನಾಂದಿ ಹಾಡಿದೆ. ಒಂದು ಬಾರಿ ದಾಖಲೆ ರಚಿಸುವ ಕನಸಿತ್ತು. ಅದು ನೆರವೇರಿದೆ. ಕಡಿಮೆ ಮತ ಬಂದಿದೆ ಎಂಬುವುದು ನಮಗೆ ನೋವಿಲ್ಲ. ಒಂದೇ ಬಾರಿ ಕ್ಷೇತ್ರದಲ್ಲಿ ತಿರುಗಾಡಿದ್ದರೆ ಮತ್ತಷ್ಟು ಲೀಡ್ ಬರುತ್ತಿದೆ. ಲೀಡ್ ಕೇಳುವವರಿಗೆ ಅಂತವರಿಗೆ ಲೋಕಸಭಾ ಚುನಾವಣೆಯಲ್ಲಿ ನೀಡುವುದಾಗಿ ಸಚಿವ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.

ಪ್ರಕಾಶ ಹುಕ್ಕೇರಿ ಅಭಿವೃದ್ದಿಯ ಹರಿಕಾರ ಅವರನ್ನು ಕಳೆದ ಬಾರಿಗಿಂತ ಹೆಚ್ಚಿನ ಲೀಡ್ ನಿಂದ ಆರಿಸಿ ತರುವಂತೆ ಸತೀಶ ಜಾರಕಿಹೊಳಿ ಕರೆ ನೀಡಿದರು.

Leave a Reply

Your email address will not be published.