ರಾಜಕೀಯ ಬದ್ಧತೆ ಇಲ್ಲದ ರಮೇಶ ಒಬ್ಬ ಸುಳ್ಳುಗಾರ ಎಂದು ಜರಿದ್ರು ಸತೀಶ ಸಚಿವ ಜಾರಕಿಹೊಳಿ…!

ಉಜಿರೆಗೆ ಹೋಗಿ ಸಿದ್ದರಾಮಯ್ಯ ಹೆಸರು ಕೆಡಿಸಲು ಯತ್ನಿಸಿದ್ದ ರಮೇಶ…

ಬೆಳಗಾವಿ: “ರಮೇಶ ಜಾರಕಿಹೊಳಿಗೆ ರಾಜಕೀಯ ಬದ್ಧತೆ ಇಲ್ಲ, ಆತ ಒಬ್ಬ ಸುಳ್ಳುಗಾರ, ಕಣ್ಣೀರು ಹಾಕುವುದು ಆತನಿಗೆ ಮಾಮೂಲು…ಬೆಳಗ್ಗೆಯಿಂದ ಸಂಜೆವರೆಗೂ ರಾಜಕೀಯ ಮಾಡ್ತಾನೆ ಇರ್ತಾನೆ….!”

ಹೀಗೆಂದು ಖಂಡತುಂಡವಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದವರು ಬೇರೆ ಯಾರೂ ಅಲ್ಲ, ಸ್ವತಃ ಅವರ ಸಹೋದರ, ಅರಣ್ಯ ಸಚಿವ ಸತೀಶ ಜಾರಕಿಹೊಳಿ…!

ಹೌದು, ಅಳಿಯ ಅಂಬಿರಾವ್ ಪಾಟೀಲ್ ಕಾರಣಕ್ಕಾಗಿ ಜಾರಕಿಹೊಳಿ ಸಹೋದರರಲ್ಲಿ ಬಿಟ್ಟಿರುವ ಬಿರುಕು ಎರಡು ದಿನಗಳಿಂದ ತಾರಕಕ್ಕೇರಿದ್ದು, ಸಹೋದರರು ಪರಸ್ಪರ ಬಹಿರಂಗ ವಾಕ್ಸಮರ ಶುರುಮಾಡಿಕೊಂಡಿರುವುದು ರಾಜ್ಯಾದ್ಯಂತ ಕುತೂಹಲದ ಚರ್ಚೆಗೆ ಗ್ರಾಸ ಒದಗಿಸಿಕೊಟ್ಟಿದೆ.

ಬೆಳಗಾವಿ ಪಿಎಲ್ ಡಿ ಬ್ಯಾಂಕಿನ ವಿಚಾರದಲ್ಲಿ ನಾವೆಲ್ಲ ಒಂದಾಗಿದ್ದೆವೆ. ಜಿಲ್ಲೆಯ ರಾಜಕಾರಣದಲ್ಲಿ ಬೇರೆಯವರು ಎಂಟ್ರಿ ಆಗಬಾರದು ಎಂಬ ಕಾರಣಕ್ಕೆ ಒಂದಾಗಿದ್ದೆವೆ. ಸಿಎಂ ಸಂಧಾನದ ಬಳಿಕ ಭಿನ್ನಮತ ಚಟುವಟಿಕೆ ಸ್ಥಗಿತಗೊಂಡಿತ್ತು. ಆದರೆ, ರಮೇಶ ಮಾತ್ರ ಭಿನ್ನಮತ ನಿಲ್ಲಿಸಲಿಲ್ಲ ಎಂದು ಸತೀಶ ಜಾರಕಿಹೊಳಿ ದೂಷಿಸಿದರು.

ಭಿನ್ನಮತ ಮಾಡುವಂತೆ ರಮೇಶ ಗೆ ನಾನು ಹೇಳಿಲ್ಲ. ಸಿದ್ದರಾಮಯ್ಯಗೂ ಗುಂಪುಗಾರಿಕೆಗೂ ಸಂಬಂಧವಿಲ್ಲ. ಉಜಿರೆಗೆ ಹೋಗಿ ಸಿದ್ದರಾಮಯ್ಯ ಹೆಸರು ಕೆಡಿಸುವ ಕೆಲಸವನ್ನು ರಮೇಶ ಮಾಡಿದರು. ಏನು ಸಮಸ್ಯೆ ಇದೆ ಎಂಬುದನ್ನು ರಮೇಶ ಹೇಳಬೇಕು ಎಂದೂ ಸತೀಶ ಹೇಳಿದರು.


Leave a Reply

Your email address will not be published.