ಅಧಿಕಾರಕ್ಕಾಗಿ ಮೋದಿ 130 ಕೋಟಿ ಜನತೆಯನ್ನು ಹುಚ್ಚರನ್ನಾಗಿಸುತ್ತಿದ್ದಾರೆ: ಸಚಿವ ಸತೀಶ ಜಾರಕಿಹೊಳಿ ವಾಗ್ದಾಳಿ

  • ಕೆಲಸ ಮಾಡುವ ಮನಸ್ಸು ಹುಟ್ಟಿನಿಂದಲೇ ಬರಬೇಕು
  • ಮೋದಿ ಆಡಳಿತದಲ್ಲಿಯೇ ಹೆಚ್ಚು ಬೀಪ್ ರಫ್ತು
  • ಸೈನ್ಯಕ್ಕಾಗಿ ಮೇಲ್ವರ್ಗದವರು ಪ್ರಾಣಕೊಟ್ಟ ಇತಿಹಾಸವಿಲ್ಲ
  • ಮೋದಿ ಆಡಳಿತ ನಡೆಸಲು ಫೇಲ್ ಆಗಿದ್ದರು ಮೀಡಿಯಾದವರು ಪಾಸ್ ಮಾಡ್ತಿದ್ದಾರೆ
  • ಸಾರಾಯಿ, ಹಣದ ಆಮಿಷಕ್ಕೊಳಗಾಗಬೇಡಿ

ಬೆಳಗಾವಿ: ಅಧಿಕಾರಕ್ಕಾಗಿ ಪ್ರಧಾನಿ ಮೋದಿ ದೇಶದ 130 ಕೋಟಿ ಜನರನನ್ನು ಹುಚ್ಚರನ್ನಾಗಿಸುತ್ತಿದ್ದಾರೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಕಡೋಲಿ ಗ್ರಾಮದಲ್ಲಿ ಇಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹಿಂದುತ್ವದ, ಕಾಶ್ಮೀರದ ವಿಷಯದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಕಾಶ್ಮೀರವನ್ನು ಸೇನೆ ಮತ್ತು ಸರಕಾರ ನಿಭಾಯಿಸುತ್ತದೆ. ಇದು ಬಿಜೆಪಿ ಮತ್ತು ಆರ್ ಎಸ್ ಎಸ್ ನ ಕೆಲಸವಲ್ಲ. ದೇಶದ ಗಂಭೀರ ಸಮಸ್ಯೆ ಬಗ್ಗೆ ಸ್ವತಂ ಲಾಭಕ್ಕಾಗಿ ಬಳಸಿಕೊಂಡು ಕೀಳುಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.


ಸೈನ್ಯಕ್ಕಾಗಿ ಮೇಲ್ವರ್ಗದವರು ಪ್ರಾಣ ಬಿಟ್ಟಿಲ್ಲ

ದೇಶ ಸೇವೆಯಲ್ಲಿ ದಲಿತರು, ಹಿಂದುಳಿದವರು, ಮುಸ್ಮಿಂ ಜನರೆ ಹೆಚ್ಚು ಪ್ರಾಣ ತ್ಯಾಗ ಮಾಡಿದ್ದಾರೆ ಹೊರತು ಮೇಲ್ವರ್ಗದವರು ಸೇನೆಗಾಗಿ ಜೀವ ಬಿಟ್ಟ ಇತಿಹಾಸವಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತ ಅವಧಿಗಿಂತ ಮೋದಿ ಆಡಳಿತದಲ್ಲಿಯೇ ಹೆಚ್ಚು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಸರಕಾರ ವಿದ್ದಾಗಲು ಹಲವು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿವೆ. ಅದರ ಶ್ರೇಯಸ್ಸು ಸೇನೆಗೆ ನೀಡಿದೆ. ಆದರೆ ಮೋದಿ ರಾಜಕೀಯ ಲಾಭಕ್ಕೆ ಬಳಿಸಿಕೊಂಡಿದ್ದು, ದುರಂತವೇ ಸರಿ. ಮೋದಿ ಆಡಳಿತ ನಡೆಸಲು ಫೇಸ್ ಆಗಿದ್ದರು ಕೂಡ ಮೀಡಿಯಾದವರು ಪಾಸ್ ಮಾಡಿ ಮಾರ್ಕ್ಸ್ ಕಾರ್ಡ್ ಹಂಚುತ್ತಿದ್ದಾರೆ ಎಂದು ಟೀಕಿಸಿದರು.

ಪಾಕಿಸ್ತಾನ ಮಾಜಿ ಪಿಎಂ ಗಲೆ ಲಗಾಕೆ, ಬಿರ್ಯಾನಿ ಖಾಕೆ ಆಯಾ!…ಪಾಕಿಸ್ತಾನವನ್ನು ಟೀಕಿಸಿ ಭಾಷಣ ಮಾಡುವ ಪ್ರಧಾನಿಯೇ ಪಾಕಿಸ್ತಾನಕ್ಕೆ ತೆರಳಿ ಮಾಜಿ ಪ್ರಧಾನಿ ನವಾಜ್ ಶರೀಫ್ ತಬ್ಬಿಕೊಂಡು ಬಿರ್ಯಾನಿ ತಿಂದು ಬಂದಿದ್ದಾರೆ. ಇಂತಹವರು ಹಿಂದುತ್ವದ ಬಗ್ಗೆ ಪಾಠ ಮಾಡುತ್ತಾರೆ ಎಂದು ಸತೀಶ ಲೇವಡಿ ಮಾಡಿದರು.

ಮೋದಿ ಆಡಳಿತದಲ್ಲಿಯೇ ಹೆಚ್ಚು ಬೀಪ್ ರಫ್ತು:

ಬಿಜೆಪಿ ನಾಯಕರು, ಮುಖಂಡರು ಅಂತರ್ಜಾತಿ ಮದುವೆಮಾಡಿಕೊಂಡರೆ ಇವರ ತಕರಾರಿಲ್ಲ. ಸಾಮಾನ್ಯ ಜನರು ಅಂತರ್ಜಾತಿ ಮದುವೆಯಾದರೆ ಮರ್ಯಾದೆ ಹತ್ಯೆಗೆ ಪ್ರೇರಣೆ ನೀಡುತ್ತಾರೆ. ಇದೆಂತಹ ನ್ಯಾಯ, ಒಂದೆಡೆ ಬೀಪ್ ಗಾಗಿ ಜನರ ಹತ್ಯೆ ನಡೆಯುತ್ತಿದೆ. ಮತ್ತೊಂದೆಡೆ ಮೋದಿ ಆಡಳಿತದಲ್ಲಿಯೇ ಅತೀ ಹೆಚ್ಚು ಬೀಪ್ ವಿದೇಶಕ್ಕೆ ರಫ್ತಾಗಿದೆ. ಇದರಲ್ಲಿ ಹಿಂದುಗಳ ಕಂಪನಿಯೇ ಹೆಚ್ಚು ಎನ್ನುವುದನ್ನು ನೀವು ಗಮನ ಹರಿಸಬೇಕು ಎಂದರು.

ರೈತರು, ದಲಿತರು, ಬಡವರ ಬಗ್ಗೆ ಪ್ರಧಾನಿ ಮೋದಿ ಮಾತನಾಡೋದೆ ಇಲ್ಲ. ಒಬ್ಬ ವ್ಯಕ್ತಿ ಕುರ್ಚಿ ಮೇಲೆ ಕುಳಿತ ತಕ್ಷಣ ಆತನಿಗೆ ಕೆಲಸ ಮಾಡೋಕೆ ಬರಲ್ಲ. ಕೆಲಸ ಮಾಡೋ ಮನಸ್ಸು ಹುಟ್ಟಿನಿಂದಲೇ ಬರಬೇಕು. ಹಿಂಧೂತ್ವ ಮತ್ಯಾವುದೇ ವಿಷಯದ ಹಿಂದೆ ಬಿದ್ದು ಜೀವನ ಹಾಳು ಮಾಡಿಕೊಳ್ಳುವ ಬದಲು ವಿಕಾಸದ ಕಡೆ ಸಾಗುವಂತೆ ಸತೀಶ ಜಾರಕಿಹೊಳಿ ಕೆರೆ ನೀಡಿದರು.

ಕಳೆದ 10 ವರ್ಷದಲ್ಲಿ ಕಡೋಲಿ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಕ್ಷೇತ್ರದ ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಕೆಲವರು ನಮ್ಮ ವಿರುದ್ದ ಗುಂಪು ಕಟ್ಟಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹ ಅವಿವೇಕಿಗಳ ಬಗ್ಗೆ ಗಮನ ಹರಿಸಬೇಡಿ. ಸಾರಾಯಿ, ಹಣದ ಆಮಿಷಕ್ಕೆ ಯಾರು ಒಳಗಾಗಬೇಡಿ. ಅಭಿವೃದ್ದಿಯ ಹರಿಕಾರ ಪ್ರಕಾಶ ಹುಕ್ಕೇರಿ ಅವರಿಗೆ ಹೆಚ್ಚು ಮತಗಳ ನೀಡುವ ಮೂಲಕ ಆರಿಸಿ ತರುವಂತೆ ಸಚಿವ ಸತೀಶ ಜಾರಕಿಹೊಳಿ ಕೋರಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಎಪಿಎಂಸಿ ಸದಸ್ಯ ಆನಂದ ಪಾಟೀಲ್, ರಾಜು ಮಾಯನ್ನಾ, ಸಂದೀಪ್ ಇತರರು ಇದ್ದರು.


Leave a Reply

Your email address will not be published.