ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಮಾತನಾಡಲೂ ಟ್ಯಾಕ್ಸ: ಸತೀಶ ಜಾರಕಿಹೊಳಿ ಎಚ್ಚರಿಕೆ !

ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಮಾತನಾಡಲೂ ಟ್ಯಾಕ್ಸ: ಸತೀಶ ಜಾರಕಿಹೊಳಿ ಎಚ್ಚರಿಕೆ !

ಅಲದಾಳ (ಬೆಳಗಾವಿ): ಸದಾ ಸುಳ್ಳು ಹೇಳುವ ನರೇಂದ್ರ ಮೋದಿ ಸರಕಾರ ಮತ್ತೊಮ್ಮೆ ಏನಾದರೂ ಅಧಿಕಾರಕ್ಕೆ ಬಂದರೆ ಮಾತನಾಡಲೂ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಅದಕ್ಕಾಗಿ ಯೋಚಿಸಿ ಮತಚಲಾಯಿಸಿ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ಪ್ರಚಾರಾರ್ಥ ದಡ್ಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಲದಾಳ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಜಿಎಸ್ ಟಿ ಯಂತಹ ಕಾಯ್ದೆ ತಂದು ಜನಸಾಮಾನ್ಯರಿಗೆ ತೊಂದರೆ ಮಾಡಿದ್ದಾರೆ. ಈ ಬಾರಿ ಮತ್ತೆ ಅಧಿಕಾರ ಕೊಟ್ಟರೆ ಮಾತಿಗೂ ಟ್ಯಾಕ್ಸ್ ಕೊಡಬೇಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಅಡುಗೆ ಅನಿಲ, ಪೆಟ್ರೋಲ್ , ಡೀಸೇಲ್ ಸೇರಿದಂತೆ ನಿತ್ಯ ಅವಶ್ಯಕ ಬೆಲೆ ಹೆಚ್ಚಳದ ಮೂಲಕ ಜನಸಾಮಾನ್ಯರಿಗೆ ಮೋದಿ ಸರಕಾರ ಹೊರೆ ಮಾಡಿದೆ. ಅದಕ್ಕಿಂತ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಕೊಡುವಲ್ಲಿ ವಿಫಲವಾಗಿ ಜನರಿಗೆ ಮೋಸ ಮಾಡಿದ್ದಾರೆ ಎಂದು ದೂಷಿಸಿದರು.

ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಮೂಲಸೌಕರ್ಯಗಳು ಸಮರ್ಪಕವಾಗಿ ಜನರ ಮನೆಗಳಿಗೆ ತಲುಪಬೇಕಾದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ದೇಶದ ಎಲ್ಲೆಡೆಯೂ ಈ ಬಾರಿ ಮೋದಿ ವಿರುದ್ಧದ ಅಲೆ ಇದ್ದು, ಜನತೆ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಚಿಕ್ಕೋಡಿಯಲ್ಲಿಯೂ ಕೈ ಮೇಲಾಗುವಂತೆ ನೋಡಿಕೊಳ್ಳಬೇಕೆಂದು ವಿನಂತಿಸಿದರು.

ಜಿ.ಪಂ ಸದಸ್ಯೆ ಮನೀಷಾ ಪಾಟೀಲ , ಸುರೇಶ ಬೆಣ್ಣಿ, ಫರೀದಾ ಮುಲ್ಲಾ, ಭಾರತಿ ಕೋಕಿತಕರ, ಮಾರುತಿ ಪಾಟೀಲ, ತುಕಾರಾಂ ಪಾಟೀಲ, ವಸಂತ ಪಾಟೀಲ ಖೋತ, ಬಸವರಾಜ ದೇಸಾಯಿ, ಗುಂಡೆಪ್ಪ ಜಕಾಯಿ, ಶಿವಲಿಂಗ ಪಾಟೀಲ , ಅರ್ಜುನ ಗಸ್ತಿ, ಸುನಿತಾ ಹರಿಜನ , ಆರ್. ಕೆ. ದೇಸಾಯಿ, ಶೀತಲಾ ಪೂಜಾರಿ, ಬಸಪ್ಪ ತಹಸೀಲ್ದಾರ, ರಮೇಶ ಪಾಟೀಲ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿದ್ದರು.

Leave a Reply

Your email address will not be published.