ಸುಳ್ಳು ಭರವಸೆಯ ಸರಕಾರ ಕಿತ್ತೊಗೆಯಿರಿ: ಸತೀಶ ಜಾರಕಿಹೊಳಿ ಮನವಿ

ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಸುಳ್ಳು ಆಶ್ವಾಸನೆ ಕೊಡುವುದು, ವಿದೇಶ ಸುತ್ತುವುದು, ರೇಡಿಯೋ ಭಾಷಣ ಮಾಡುವುದನ್ನು ಬೇರೆ ಏನನ್ನೂ ಮಾಡಿಲ್ಲ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಕಟುವಾಗಿ ಟೀಕಿಸಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕೈ-ಜೆಡಿಎಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಚುನಾವಣಾ ಪ್ರಚಾರಾರ್ಥ ಕುಡಚಿ ಮತಕ್ಷೇತ್ರ ವ್ಯಾಪ್ತಿಯ ಹಾರೂಗೇರಿಯ ಸಿಪಿಎಡ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ಸೋಮವಾರ ಅವರು ಮಾತನಾಡಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ ಮತ್ತು ಸಿದ್ದರಾಮಯ್ಯ ನವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಕಾರ್ಯಕರ್ತರಿಂದ ಆಗಬೇಕಿದೆ ಎಂದು ಅವರು ಹೇಳಿದರು.
ಕೃಷಿಹೊಂಡ , ಕೆರೆ ನೀರು ತುಂಬಿಸುವುದು ನೀರಾವರಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸಿದ್ದರಾಮಯ್ಯ ಅವರ ನೇತೃತ್ವದ ಕೈ ಸರಕಾರ ಮತ್ತು ಈಗಿರುವ ದೋಸ್ತಿ ಸರಕಾರ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿವೆ.

ಸುಳ್ಳಿನ ಸರದಾರಂತೆಯೇ ಇರುವ ಬಿಜೆಪಿ ಬರೀ ಭಾಷಣಕಾರರ ಮಾತಿಗೆ ಮರುಳಾಗದೇ ಅಭಿವೃದ್ದಿಯ ನಿಜವಾದ ಕಳಕಳಿ ಉಳ್ಳ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮತದಾರರ ಮನವೊಲಿಸಲು ಕಾರ್ಯಕರ್ತರು ಯಶಸ್ವಿಯಾಗುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.

ಮಾಜಿ ಶಾಸಕ ಶ್ಯಾಮ ಘಾಟಗೆ, ಮುಖಂಡರಾದ ಈರಗೌಡ ಪಾಟೀಲ , ಮಹಾವೀರ ಮೋಹಿತೆ , ಸೇರಿದಂತೆ ಸ್ಥಳೀಯ ತಾ.ಪಂ ,ಗ್ರಾಂ.ಪಂ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.