ರಮೇಶ ಬಾರದಕ್ಕೆ ನಮ್ಮಿಂದಲೇ ಪ್ರಚಾರ ಅಂದ್ರು ಸತೀಶ ಜಾರಕಿಹೊಳಿ…!

ಬೆಳಗಾವಿ: ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪಕ್ಷದ ಪರವಾಗಿ ಕೆಲಸ ಮಾಡಲು ಆಸಕ್ತಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಸಚಿವ ಸತೀಶ ಜಾರಕಿಹೊಳಿ, ಹೀಗಾಗಿ ಗೋಕಾಕ ಕ್ಷೇತ್ರದಲ್ಲಿ ಯಾವೇ ಮುತುವರ್ಜಿ ವಹಿಸಿ ಪ್ರಚಾರ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ರಮೇಶ ಜಾರಕಿಹೊಳಿ ಅಥವಾ ತಾವು ಇಲ್ಲಿ ಮುಖ್ಯವಲ್ಲ, ಪಕ್ಷದ ಹಿತ ಕಾಯುವುದು ಮುಖ್ಯ. ರಮೇಶ ಸದ್ಯಕ್ಕಂತೂ ತಟಸ್ಥವಾಗಿ ಉಳಿದಿದ್ದಾರೆ ಎಂದು ಅವರು ಗೋಕಾಕ ತಾಲೂಕಿನ ಕೊಳವಿಯಲ್ಲಿ ಹೇಳಿದರು.

ಸುರೇಶ ಅಂಗಡಿಗೆ ಜಾತಕ ಬಲವಿದೆ ಎಂಬ ಬಾಲಚಂದ್ರ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿ ಜಾತಕ, ಪಂಚಾಂಗ ನಂಬಿರೋ ಮನುವಾದಿಗಳ ಪಕ್ಷ ಎಂದು ಟೀಕಿಸಿದರು.

ಸುರೇಶ ಅಂಗಡಿ ಸಂಸದರಾಗಿ ಜಿಲ್ಲೆಗೆ, ಪಕ್ಷಕ್ಕೆ ಅಥವಾ ಸಮಾಜಕ್ಕೆ ಏನೂ ಕೊಡುಗೆ ನೀಡಿಲ್ಲ. ಬರೀ ಗಾಳಿಯಲ್ಲಿಯೇ ಮೂರು ಬಾರಿ ಗೆದ್ದಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಜನರ ಆಶೀರ್ವಾದ ಬೇಕು ಎಂದರು.Leave a Reply

Your email address will not be published.