ಚಾಮರಾಜನಗರ ಜಿಲ್ಲೆಯಲ್ಲಿ ಇಂದು ಸತೀಶ ಜಾರಕಿಹೊಳಿ ಪ್ರಚಾರ…!

ಬೆಳಗಾವಿ: ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರು ಇಂದು (14-4-2019) ಬೆಳಗ್ಗೆ 11 ಗಂಟೆಗೆ ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಚಾಮರಾಜನಗರದಲ್ಲಿ ಹಾಗೂ 3 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ತೆರಕನಂಬಿಯಲ್ಲಿ ಸಚಿವರು ಪ್ರಚಾರ ಭಾಷಣ ಮಾಡಲಿದ್ದಾರೆ.

ಮಧ್ಯಾಹ್ನ 4 ಕ್ಕೆ ಗುಂಡ್ಲುಪೇಟೆ, 5 ಕ್ಕೆ ನಂಜನಗೂಡು,ಸಂಜೆ 6 ಕ್ಕೆ ಮೈಸೂರಿನಲ್ಲಿ ಸಚಿವರು ಪ್ರಚಾರ ಭಾಷಣ ಮಾಡುವರು.

15 ರಂದು ಮಧ್ಯಾಹ್ನ 12 ಕ್ಕೆ ರಾಯಬಾಗ, 2 ಗಂಟೆಗೆ ಹಾರೂಗೇರಿ, 5 ಗಂಟೆಗೆ ಅಥಣಿಯಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published.