ಇಂದು ಕಡೋಲಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಪ್ರಚಾರ

ಬೆಳಗಾವಿ: ಅರಣ್ಯ ಮತ್ತು ಪರಿಸರ ಖಾತೆ ಸಚಿವ ಸತೀಶ ಜಾರಕಿಹೊಳಿ ಅವರು ಇಂದು (ಏಪ್ರಿಲ್ 16) ಮಧ್ಯಾಹ್ನ 12 ಗಂಟೆಗೆ ಕಡೋಲಿಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಮಧ್ಯಾಹ್ನ 2 ಗಂಟೆಗೆ ಅಲದಾಳ ಅತಿಥಿಗೃಹ, 4 ಗಂಟೆಗೆ ಹುಕ್ಕೇರಿ ತಾಲೂಕಿನ ರಾಜಕಟ್ಟಿ ಹಾಗೂ ಸಂಜೆ 6 ಕ್ಕೆ ಹುದಲಿಯಲ್ಲಿ ಪ್ರಚಾರ ನಡೆಸುವರು.

ಏಪ್ರಿಲ್ 17 ರಂದು ಸಚಿವರು11 ಗಂಟೆಯವರೆಗೆ ಬೆಳಗಾವಿಯಲ್ಲಿಯೇ ಲಭ್ಯವಿರುವರು. ಮಧ್ಯಾಹ್ನ 12 ಕ್ಕೆ ಗೋಕಾಕ ಮತಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ.

18 ರಂದು 12 ಗಂಟೆಗೆ ಯಮಕನಮರಡಿ, 1 ಗಂಟೆಗೆ ಹೆಬ್ಬಾಳ ಹಾಗೂ 2 ಗಂಟೆಗೆ ಘಟಪ್ರಭಾದಲ್ಲಿ ಸಚಿವರು ಪ್ರಚಾರ ಸಭೆ ನಡೆಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published.