ಮೋದಿಗೆ ಹೆಂಡತಿ , ಮಕ್ಕಳಿಲ್ಲ ಹೀಗಾಗಿ ಅವರಿಗೆ ಸಮಸ್ಯೆ ಅರ್ಥವಾಗುವುದಿಲ್ಲ: ಪವಾರ್

ಜಲನಾ( ಮಹಾರಾಷ್ಟ್ರ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹೆಂಡತಿ , ಮಕ್ಕಳು ಯಾರೂ ಇಲ್ಲ. ಹೀಗಾಗಿ ಕುಟುಂಬದ ಮಹತ್ವವಾಗಲೀ ಸಮಸ್ಯೆಗಳಾಗಲೀ ಅವರಿಗೆ ಗೊತ್ತಾಗುವುದಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ ಕಟುವಾಗಿ ಟೀಕಿಸಿದ್ದಾರೆ.

ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಕುಟುಂಬದಲ್ಲಿ ಯಾರೂ ಇಲ್ಲ. ಒಂದು ಕುಟುಂಬದಲ್ಲಿ ಏನೇನಿರುತ್ತದೆ? ಎಂತಹ ಸಮಸ್ಯೆಗಳು ಬರುತ್ತವೆ ? ಎಂಬುದೆಲ್ಲ ಅವರಿಗೆ ಗೊತ್ತಿಲ್ಲ. ಹೀಗಾಗಿ ಮತ್ತೊಬ್ಬರ ಕುಟುಂಬದ ಬಗ್ಗೆ ಅವರು ಮಾತನಾಡುತ್ತಾರೆ ಎಂದು ತಮ್ಮ ಕುಟುಂಬದ ಬಗ್ಗೆ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.

ಮತ್ತೊಬ್ಬರ ಕುಟುಂಬ ವ್ಯವಹಾರದಲ್ಲಿ ಮೂಗು ತೂರಿಸಬಾರದು ಮೋದಿಜಿ. ನಾನೂ ಬೇಕಾದಷ್ಟು ಹೇಳಬಹುದು. ಆದರೆ, ಆಮಟ್ಟಕ್ಕೆ ಇಳಿಯುವುದಿಲ್ಲ ಎಂದರು.

Leave a Reply

Your email address will not be published.