ಬಿ.ಶ್ರೀರಾಮುಲುಗೆ ಬಿಜೆಪಿಯಲ್ಲಿ ಉತ್ತಮ ಭವಿಷ್ಯ ಇದೆ : ಶರಣಪ್ಪ ನಾಯಕ

ಬಿ.ಶ್ರೀರಾಮುಲು ಅವರಿಗೆ ಬಿಜೆಪಿ ಯಲ್ಲಿ ಉತ್ತಮ್ಮ ಭವಿಷ್ಯ ಇದೆ : ಶರಣಪ್ಪ ನಾಯಕ

ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ವಾಲ್ಮೀಕಿ ನಾಯಕ ಸಂಘದ ಆಕ್ರೋಶ

ಕೊಪ್ಪಳ: ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರು ವಾಲ್ಮೀಕಿ ನಾಯಕ ಸಮಾಜದ ಕಣ್ಮಣಿಯಾಗಿದ್ದಾರೆ,  ವಾಲ್ಮೀಕಿ ನಾಯಕ ಸಮಾಜದ ಬೆಂಬಲ ಶ್ರೀರಾಮುಲುರವರಿಗೆ ಇದೆ, ಅವರು ಎಲ್ಲಿ ಇರುತ್ತಾರೂ ಅಲ್ಲಿ ಬಹುತೇಕ ನಮ್ಮ ಸಮಾಜ ಇದ್ದೇ ಇರುತ್ತೆ ಎಂದು ತಾಲೂಕಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಶರಣಪ್ಪ ನಾಯಕ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿಯವರು ಶ್ರೀರಾಮುಲು ಅವರನ್ನು ಬಿಜೆಪಿ ಯೂಸ್ ಅಂಡ್ ಥ್ರೋ ಬಳಕೆ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಸಮಾಜದಿಂದ ಬಲವಾಗಿ ಖಂಡಿಸುತ್ತೇವೆ, ಇದನ್ನು ರಾಜ್ಯದ ಎಲ್ಲಾ ವಾಲ್ಮೀಕಿ ನಾಯಕ ಸಮುದಾಯವು ವಿರೋಧಿಸುತ್ತದೆ ಎಂದರು.

ಜಿಲ್ಲಾ ವಾಲ್ಮೀಕಿ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಡೊಣ್ಣಿ ಮಾತನಾಡಿ, ಇಂದಿನ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ ಶ್ರೀಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವಕ್ಕೆ ಹಾಲಿ-ಮಾಜಿ ಸಿಎಂ ಗೈರಾ ಹಾಜರಾದರು, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸದೇ ಸಮಾಜಕ್ಕೆ ಅವಮಾನಿಸಿದರು. ಹೀಗಾಗಿ ಯಾವತ್ತು ವಾಲ್ಮೀಕಿ ನಾಯಕ ಸಮಾಜದ ಬೆಂಬಲ ಶ್ರೀರಾಮುಲುರವರಿಗೆ ಎಂದರು.

ವಾಲ್ಮೀಕಿ ಸಮಾಜವನ್ನು ಪದೇ ಪದೇ ಅವಮಾನಿಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷದ ಮಾಜಿ ಸಿಎಂ ಸಿದ್ಧರಾಮಯ್ಯ ಕೇಂದ್ರ ಸರಕಾರ ನೀಡಿದ ಶೇ 7.5% ಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲಿಲ್ಲ, ಕೇವಲ ಶೇ.3% ಮೀಸಲಾತಿಯಲ್ಲೇ ಬೇರೆ ಬೇರೆ ಜಾತಿಗಳನ್ನು ಸೇರಿಸುವದರ ಜೊತೆಗೆ ಸ್ವ-ಜಾತಿಗಳನ್ನು ಸೇರಿಸಲು ಪ್ರೋತ್ಸಾಹ ಮಾಡಿದರು – ಶರಣಪ್ಪ ನಾಯಕ, ಶ್ರೀ ಮಹರ್ಷಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು, ಕೊಪ್ಪಳ.

ಸುದ್ದಿಗೋಷ್ಠಿಯಲ್ಲಿ  ಬಿಜೆಪಿ ಎಸ್.ಟಿ.ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಬೆಲೇರಿ, ವಾಲ್ಮೀಕಿ ನಾಯಕ ಸಮಾಜದ ಗೌರವ ಅಧ್ಯಕ್ಷ ದೇವೇಂದ್ರಪ್ಪ ಗುನ್ನಳ್ಳಿ, ರಮೇಶ ಡಂಬ್ರಳ್ಳಿ, ಶಂಕ್ರಗೌಡ ಬೆಳ್ಳಗಟ್ಟಿ, ಲಕ್ಷ್ಮಣ ಚೌಡ್ಕಿ, ವೆಂಕಟೇಶ್ ನಿರಲಗಿ, ಕನಕಪ್ಪ ತಳವಾರ, ಪರಶುರಾಮ ನಾಯಕ ಸೇರಿ ಇತರರು ಉಪಸ್ಥಿತರಿದ್ದರು.


Leave a Reply

Your email address will not be published.