ಬಿಜೆಪಿ ಮತ ಹಾಕದವ್ರು ತಾಯಗಂಡ್ರು ಸಿ.ಟಿ ರವಿ ಹೇಳಿಕೆಗೆ ಸಿದ್ದರಾಮಯ್ಯ ಕಿಡಿ

ಚಿಕ್ಕಮಗಳೂರು: ಬಿಜೆಪಿಗೆ ಮತ ಹಾಕದೆ ಇದ್ರೆ ಅದು ಉಂಡ ಮನೆಗೆ ದ್ರೋಹ ಮಾಡೋದು ಅಥವಾ ಹಳ್ಳಿ ಕಡೆ ಹೇಳ್ತಾರಲ್ಲಾ ತಾಯಿ ಗಂಡ್ರು ಆ ಲೆಕ್ಕ ಎಂಬ ಶಾಸಕ ಸಿಟಿ ರವಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಹೇಳಿಕೆಯಿಂದಲೇ ಆತನ ಸಂಸ್ಕೃತಿ ಎಂತದ್ದು, ಎಂಬುದು ಗೊತ್ತಾಗುತ್ತದೆ. ತಾಯಿ ಗಂಡ ಕೆಲಸ ಅಂದ್ರೆ? ಅವನು ಹಾಗೇ ಇರಬೇಕು ನನಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Leave a Reply

Your email address will not be published.