ಬಿಜೆಪಿ ಅಭ್ಯರ್ಥಿಗಳು ಮಾನಗೆಟ್ಟವರು ಎಂದು ಸಿದ್ದರಾಮಯ್ಯ ಜರಿದದ್ದೇಕೆ?

ಯಾದಗಿರಿ:” ಭಾರತೀಯ ಜನತಾಪಕ್ಷದ ಎಲ್ಲ 27 ಅಭ್ಯರ್ಥಿಗಳೂ ಮಾನಗೆಟ್ಟವರು….”

ಹೀಗೆಂದು ಖಾರವಾಗಿ ಜರಿದವರು ಬೇರೆ ಯಾರೂ ಅಲ್ಲ, ಮಾಜಿ ಸಿಎಂ ಸಿದ್ದರಾಮಯ್ಯ!

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ಭಾಷಣ ಮಾಡಿದ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಮ್ಮನ್ನು ನೋಡಿ ಬೇಡ, ಮೋದಿ ಮುಖ ನೋಡಿ ಬಿಜೆಪಿಗೆ ಮತ ಹಾಕಿ ಎಂದು ಎಲ್ಲಾ 27 ಅಭ್ಯರ್ಥಿಗಳು ಕೇಳುತ್ತಿದ್ದಾರೆ. ಹಾಗಾದರೆ ಇವರೇಕೆ ಚುನಾವಣೆಗೆ ನಿಂತಿದ್ದಾರೆ? ಅವೆಲ್ಲ ಮಾನಗೆಟ್ಟವರು ಎಂದು ಹರಿಹಾಯ್ದರು.

Leave a Reply

Your email address will not be published.