ಸುರಪುರದಲ್ಲಿ ಮತಯಾಚಿಸಿದ ಎಸ್‍ಯುಸಿ ಅಭ್ಯರ್ಥಿ ಸೋಮಶೇಖರ್


ಸುರಪುರ: ದೇಶದಲ್ಲಿ ಇದುವರೆಗೆ ಆಡಳಿತ ನಡೆಸಿದ ಸರಕಾರಗಳು ರೈತ, ಕಾರ್ಮಿಕ,ಬಡವರ ಅಭಿವೃದ್ದಿ ಮರೆತು ಬಂಡವಾಳ ಶಾಹಿ ಬೆನ್ನುಬಿದ್ದಿವೆ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಎಸ್‍ಯುಸಿ(ಐ) ಅಭ್ಯರ್ಥಿ ಕೆ.ಸೋಮಶೇಖರ ಆಪಾದಿಸಿದರು.

ಮಂಗಳವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಮತಯಾಚನೆ ನಡೆಸಿ ಮಾತನಾಡಿ, ಸ್ವಾತಂತ್ರ್ಯ ಬಳಿಕ ಇಂದಿಗೂ ಬಡವರು ಬಡವರಾಗಿ ಉಳಿದಿದ್ದಾರೆ. ಸರಕಾರಗಳು ಬಡವರನ್ನ ಮರೆತು ಕೇವಲ ಶ್ರೀಮಂತರ ಸಾಲ ಮನ್ನಾ ಮಾಡುತ್ತ,ಸಾವಿರಾರು ಕೋಟಿ ವಂಚಿಸಿ ದೇಶ ಬಿಟ್ಟು ಹೋಗಲು ಅವಕಾಶ ಮಾಡಿಕೊಡುತ್ತಾರೆ. ಆದರೆ ರೈತರ ಸಾಲ ಮನ್ನಾ ಮಾಡದೆ, ಕಾರ್ಮಿಕರಿಗೆ ತಿಂಗಳಿಗೆ ಸರಿಯಾದ ಸಂಬಳ ನಿಗದಿ ಮಾಡದೆ ಮೋಸ ಮಾಡುತ್ತಿವೆ. ಇಂತ ಸರಕಾರಗಳನ್ನು ತೊಲಗಿಸಿ ಉತ್ತಮ ಆಡಳಿತ ನೀಡಲು ಎಸ್‍ಯುಸಿ(ಐ) ಪಕ್ಷಕ್ಕೆ ಮತದಾರರು ಬೆಂಬಲಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಎಸ್ ಯುಸಿ(ಐ)ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ,ಶರಣಗೌಡ ಗೂಗಲ್,ಶಿವರಾಜ ಯಳವಾರ ಸೇರಿದಂತೆ ಅನೇಕ ಜನ ಮಹಿಳೆಯರು ಮತ್ತು ಕಾರ್ಮಿಕರು ಭಾಗವಹಿಸಿದ್ದರು.

Leave a Reply

Your email address will not be published.