ದೇಶ ಅಭಿವೃದ್ದಿಗೊಳಿಸುವಲ್ಲಿ ಕಾಂಗ್ರೆಸ್ ಬಿಜೆಪಿ ಸೋತಿವೆ-ಸೋಮಶೇಖರ

ಸುರಪುರ: ದೇಶದ ಅಭಿವೃದ್ದಿ ನಿರ್ಲಕ್ಷಿಸಿರುವ ಕಾಂಗ್ರೆಸ್- ಬಿಜೆಪಿ ಪಕ್ಷವನ್ನು ಜನ ತಿರಸ್ಕರಿಸಬೇಕು ಎಂದು ಎಸ್‍ಯುಸಿಐ(ಸಿ) ಅಭ್ಯರ್ಥಿ ಕೆ.ಸೋಮಶೇಖರ ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್‍ಯುಸಿಐ(ಐ) ದೇಶದ 109 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಸಿದೆ. ರಾಜ್ಯದ 7 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳಿದ್ದು,ಅದರಂತೆ ರಾಯಚೂರು ಕ್ಷೇತ್ರದ ಅಭ್ಯರ್ಥಿಯಾಗಿ ನಾನು ಸ್ಫರ್ಧಿಸಿದ್ದೇನೆ. ಕಳೆದ ಅನೇಕ ವರ್ಷಗಳಿಂದ ಸಂಘಟನೆಯ ಮೂಲಕ ಹೋರಾಟ ನಡೆಸಿ,ಅಂಗನವಾಡಿ ಕಾರ್ಯಕರ್ತೆಯರ,ಆಶಾ ಕಾರ್ಯಕರ್ತೆಯರ,ಬಿಸಿಯೂಟ ನೌಕರರ, ಕಾರ್ಮಿಕರ ಹಲವಾರು ಸಮಸ್ಯೆಗಳಿಗಾಗಿ ಹೋರಾಟ ಮಾಡಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗಿದೆ.

ದೇಶದಲ್ಲಿರುವ ಪ್ರತಿ ಕಾರ್ಮಿಕರಿಗೆ ಕನಿಷ್ಟ ಹದಿನೆಂಟು ಸಾವಿರ ರೂಪಾಯಿ ಸಂಬಳ ನೀಡುವ ಕಾನೂನು,ಭೂ ರಹಿತರಿಗೆ ಭೂಮಿ ನೀಡಬೇಕು ಎಂಬ ಅನೇಕ ವಿಷಯಗಳನ್ನಿಟ್ಟುಕೊಂಡು ನಮ್ಮ ಎಸ್‍ಯುಸಿಐ(ಸಿ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಮತದಾರರು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.

ಎಸ್‍ಯುಸಿಐ(ಸಿ) ಕಾರ್ಯದರ್ಶಿ ವಿ.ಭಗವಾನರಡ್ಡಿ ಮಾತನಾಡಿ,ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ಕಪ್ಪು ಹಣತಂದು ಎಲ್ಲರ ಖಾತೆಗೆ ಹದಿನೈದು ಲಕ್ಷ ಹಾಕುವೆ ಎಂದರು ಇಂದು ಪೈಸೆನು ತರಲಿಲ್ಲ,ಖಾತೆಗಳಿಗು ನಯಾ ಪೈಸೆ ಹಾಕಿಲ್ಲ.sssವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಸುಳ್ಳು ಹೇಳಿದ್ದಾರೆ,ದೇಶದಲ್ಲಿ ಸುಮಾರು ಇಪ್ಪತ್ತೈದು ಲಕ್ಷ ಕೇಂದ್ರ ಸರಕಾರದ ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿವೆ ಎಂದು ಬೇಸರ ವ್ಯಕ್ತಪಡಿಸಿ,ದೇಶದ ರೈತ,ಕಾರ್ಮಿಕ,ಮಹಿಳೆ ಮತ್ತು ಬಡವರ ಅಭಿವೃದ್ದಿ ಗುರಿಯಿಟ್ಟುಕೊಂಡಿರುವ ನಮ್ಮ ಎಸ್‍ಯುಸಿಐ(ಸಿ) ಪಕ್ಷಕ್ಕೆ ಮತ ನೀಡುವಂತೆ ಕೊರಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶರಣಗೌಡ ನಗನೂರ,ಶಿವರಾಜ ಯಳವಾರ ಇದ್ದರು.

Leave a Reply

Your email address will not be published.