ಲೋಕಸಭಾ ಚುನಾವಣೆ: ಸುರಪುರದಲ್ಲಿ ಪೊಲೀಸ್ ಪಥ ಸಂಚಲನ


ಸುರಪುರ: ರಾಜ್ಯದಲ್ಲಿ ಅತೀ ಸೂಕ್ಷ್ಮ ಮತಕ್ಷೇತ್ರದಲ್ಲಿ ಒಂದಾದ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ 2019-20ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಅಂಗವಾಗಿ ನಗರದಲ್ಲಿ ಪೊಲೀಸ್ ಪಥ ಸಂಚಲನ ನಡೆಸಲಾಯಿತು.

ಬುಧವಾರ ಬೆಳಿಗ್ಗೆಯೆ ಸುರಪುರ ಮತ್ತು ರಂಗಂಪೇಟೆಯ ಜನರಿಗೆ ಪೊಲೀಸ್ ಬೂಟಿನ ಸದ್ದು ಕೇಳಿಸಿದ್ದರಿಂದ ಜನರು ರಸ್ತೆಗ ಬಂದು ನೋಡುವಂತಾಯಿತು. ನೂರಾರು ಸಂಖ್ಯೆಯ ಜಿಲ್ಲಾ ಮೀಸಲು ಪಡೆಯ ಪೊಲೀಸರು ಕೈಯಲ್ಲಿ ಬಂದೂಕು ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿ ಚುನಾವಣೆ ಸಂದರ್ಭದಲ್ಲಿ ಯಾವುದೆ ರೀತಿಯ ಅಹಿತಕರ ಘಟನೆಗಳಿಗೆ ಪ್ರಚೋದಿಸುವವರಲ್ಲಿ ನಡುಕ ಹುಟ್ಟುವಂತೆ ಎಲ್ಲೆಡೆ ಸಂಚರಿಸಿದರು,ಅಲ್ಲದೇ ಜನ ಸಾಮಾನ್ಯರು ಮನೆಯಿಂದ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಲು ಅನುವು ಮಾಡಿಕೊಡುವ ಭರವಸೆ ಮೂಡಿಸಿದರು.

ನಾಲ್ಕಕ್ಕು ಹೆಚ್ಚಿನ ವಾಹನಗಳಲ್ಲಿ ಆಗಮಿಸಿದ ಪೊಲೀಸರು ಎಲ್ಲೆಡೆ ಪಥ ಸಂಚಲನ ನಡೆಸಿದ್ದನ್ನು ಜನರು ಬೆರಗಾಗಿ ವೀಕ್ಷಿಸುತ್ತಿದ್ದರು.

ಪಥ ಸಂಚಲನದಲ್ಲಿ ಡಿವಾಯ್‍ಎಸ್‍ಪಿ ಶಿವನಗೌಡ ಪಾಟೀಲ,ಸುರಪುರ ಠಾಣೆ ಪೊಲೀಸ್ ಇನ್ಸ್ಪೇಕ್ಟರ್ ಆನಂದರಾವ್ ಹಾಗು ಪಿಎಸ್‍ಐ ಸೋಮಲಿಂಗ ಒಡೆಯರ್ ಸೇರಿದಂತೆ ಹುಣಸಗಿ ಕೊಡೇಕಲ್ ಠಾಣೆಗಳ ಅಧಿಕಾರಿಗಳು ಪಥಸಂಚಲನದಲ್ಲಿದ್ದರು.

Leave a Reply

Your email address will not be published.