ಕಾಂಗ್ರೆಸ್ ಬೆಂಬಲಿಸುವಂತೆ ಮತದಾರರನ್ನು ಮನವಲಿಸಿ: ರಾಜಾ ವೆಂಕಟಪ್ಪ ನಾಯಕ


ಸುರಪುರ: ನರೇಂದ್ರ ಮೋದಿಯವರ ಕೇಂದ್ರ ಸರಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಹಾಗೂ ನೋಟು ಅಮಾನ್ಯಿಕರಣ ಮತ್ತು ಜಿಎಸ್‍ಟಿ ಯಂತಹ ಯೋಜನೆಗಳನ್ನು ಜಾರಿಗೆ ತಂದು ದೇಶದ ಆರ್ಥಿಕ ಸ್ಥಿತಿಯನ್ನು ಗಂಭೀರಗೊಳಿಸಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹರಿಹಾಯದರು.

ತಾಲೂಕಿನ ಸತ್ಯಂಪೇಟ, ಶಖಾಪುರ, ಹಾಲಗೇರಾ, ಕರ್ನಾಳ, ಚೌಡೇಶ್ವರಿಹಾಳ, ಅಡ್ಡೂಡಗಿ, ಹೆಮ್ಮಡಿ, ಬೇವಿನಾಳ ಗ್ರಾಮಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಅವರು ಅಧಿಕ ಮತಗಳಿಂದ ಜಯಗಳಿಸಲು ಕಾರ್ಯಕರ್ತರು ಶ್ರಮವಹಿಸಬೇಕು ಹಾಗೂ ಕೇಂದ್ರ ಸರಕಾರದ ವೈಫಲ್ಯಗಳನ್ನು ಜನರಿಗೆ ತಿಳೀಸಿ ಕಾಂಗ್ರೇಸ್ ಪರ ಮತ ಚಲಾಯಿಸಲು ಮನ ಒಲಸಿ ಮತ್ತು ಬಿಜೆಪಿ ಅವರು ಹೇಳು ಸುಳ್ಳು ಭರವಸೆಗಳನ್ನು ನಂಬದಂತೆ ತಿಳಿಸಿ ಎಂದರು.

ಸೂಲಪ್ಪ ಕಮತಿಗಿ, ರಾಜಾ ರೂಪಕುಮಾರ ನಾಯಕ, ಶ್ರೀನಿವಾಸ ಪಾಟೀಲ್, ಬಸವಂತ್ರಾಯ ಗೌಡ, ಗೋಪಾಲ ಶುಕ್ಲಾ, ಪುರಸಭೆ ಮಾಜಿ ಸದಸ್ಯರಾದ ವೆಂಕಟೇಶ ಶೂಕ್ಲಾ, ಯಂಕಪ್ಪ ನಾಯ್ಕೋಡಿ, ಮರೆಪ್ಪ ನಾಯ್ಕೋಡಿ, ಬಸನಗೌಡ, ಸೋಮನಗೌಡ, ಹುಲಗಪ್ಪ, ನಾರಾಯಣ, ಶಣ್ಮುಖ, ಮಾನಶಪ್ಪ, ಅರೆಪ್ಪ, ಹಣಮಂತ್ರಾಯ ಮುಕಣ್ಣ, ಸಣ್ಣ ಬಸವರಾಜ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ದ್ಯಾವಪ್ಪ ಪೂಜಾರಿ, ಮರೆಪ್ಪಗೌಡ ಪೊಲೀಸ್ ಪಾಟೀಲ್, ಸಂಗಣ್ಣ, ಬಸವರಾಜ, ನಿಂಗಣ್ಣ ಗೌಡ ಪೊಲೀಸ್ ಪಾಟೀಲ್, ದೊಡ್ಡ ಬಸವರಾಜ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಯುವ ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published.