ಮತಯಂತ್ರ‌ ಧ್ವಂಸಗೊಳಿಸಿದ ವ್ಯಕ್ತಿ ಬಂಧನ

ಸುರಪುರ: ಮತಯಂತ್ರ ಧ್ವಂಸಗೊಳಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಸುರಪುರ ತಾಲೂಕಿನ ಕರಿಬಾವಿ ಗ್ರಾಮದಲ್ಲಿ ನಡೆದಿದೆ.

ಗುರುನಾಥಗೌಡ ಪೊಲೀಸ್ ಪಾಟೀಲ್(40) ಬಂಧಿತ.

ಬೆಳಿಗ್ಗೆಯಿಂದ ಶಾಂತಿಯುತವಾಗಿ ಮತದಾನ ಆರಂಭಗೊಂಡಿತ್ತಾದರೂ ಮಧ್ಯಾಹ್ನದ ವೇಳೆಗೆ ಬಿಜೆಪಿ ಮುಖಂಡರು ಮತದಾನ ಕೇಂದ್ರದಲ್ಲಿ ಅಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಸುರಪುರ ತಾಲೂಕಿನ ಕರಿಬಾವಿ ಗ್ರಮದಲ್ಲಿನ ಮತಗಟ್ಟೆ ಸಂಖ್ಯೆ 31 ರಲ್ಲಿನ ಮತಯಂತ್ರ ಧ್ವಂಸಗೊಳಿಸಿದ್ದಾ‌ನೆ.

ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published.