ನವೋದಯ ಪರೀಕ್ಷೆಯಲ್ಲಿ ಕೊಠಡಿ ಮೇಲ್ವಿಚಾರಕರ ಎಡವಟ್ಟು:ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು

ಸುರಪುರ: 2019- 20ನೇ ಸಾಲಿನ ನವೋದಯ ಶಾಲೆಯ ವಿದ್ಯಾರ್ಥಿಗಳಿಗಾಗಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಕೊಠಡಿ ಮೇಲ್ವಿಚಾರಕರು ಯಡವಟ್ಟು ಮಾಡಿದ ಘಟನೆ ಇಂದು ಜರುಗಿದೆ.

ನಗರದ ಕುಂಬಾರ ಪೇಟೆಯಲ್ಲಿರುವ ಪ್ರೇರಣಾ ಶಿಕ್ಷಣ ಸಂಸ್ಥೆಯಲ್ಲಿ ಇಂದು ಜರುಗಿದ ನವೋದಯ ಪ್ರವೇಶ ಪರೀಕ್ಷೆ ಸಂದರ್ಭ ಏಳು ಕೊಠಡಿಗಳಲ್ಲಿ ನ 19 ಜನ ವಿದ್ಯಾರ್ಥಿಗಳಿಗೆ ಅವರವರ ಕ್ರಮ ಸಂಖ್ಯೆಯ ಒ ಎಮ್ಮೆ ಆರ್ ಪತ್ರಿಕೆಗಳನ್ನು ನೀಡದೆ ಅದಲು ಬದಲು ನೀಡಿದ್ದರಿಂದ ವಿದ್ಯಾರ್ಥಿಗಳು ಬೇರೆಯವರ ಒ ಎಮ್ ಆರ್ ಪತ್ರಿಕೆಯಲ್ಲಿ ಉತ್ತರಗಳಿಗೆ ಗುರುತು ಹಾಕಿ ಪರದಾಟಕ್ಕೆ ಸಿಲುಕಿದ ಘಟನೆ ಜರುಗಿದೆ.

ಒಟ್ಟು 17 ಕೊಠಡಿಗಳಲ್ಲಿ ನಡೆದ ಪರೀಕ್ಷೆಯಲ್ಲಿ ಏಳು ಕೊಠಡಿಗಳಲ್ಲಿ ನ ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಎದುರಾಗಿದ್ದು ಕನಿಷ್ಠ 25 ಅಂಕಗಳ ಪ್ರಶ್ನೆಗಳನ್ನು ಬಿಡಿಸಿದ ನಂತರದಲ್ಲಿ ಕೊಠಡಿಯ ಮೇಲ್ವಿಚಾರಕರಿಗೆ ವಿಷಯ ತಿಳಿದು,ನಂತರ ಅದಲು ಬದಲು ಒ ಎಮ್ ಆರ್ ಉತ್ತರ ಪತ್ರಿಕೆಗಳನ್ನು ಮರಳಿ ಪಡೆದು ಅವುಗಳಿಗೆ ಬಿಳಿ ಬಣ್ಣ (ವೈಟ್ನರ್) ಹಚ್ಚಿ ಮತ್ತೆ ಬರೆಯಲು ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮ ಸಂಖ್ಯೆಯಂತೆ ವಿತರಿಸಲಾಗಿದೆ.ಆದರೆ ಈ ಸರಿಯಾದ ಕ್ರಮ ಸಂಖ್ಯೆಯ ಉತ್ತರ ಪತ್ರಿಕೆ ನೀಡುವ ಪೂರ್ವದಲ್ಲಿ ಗುರುತು ಹಾಕಿರುವ ಉತ್ತರ ಸರಿಯೋ ತಪ್ಪೋ ಆಗಿದ್ದಲ್ಲಿ ನಂತರದಲ್ಲಿ ಆ ಪತ್ರಿಕೆಗಳನ್ನು ಪಡೆದು ಬರೆದ ವಿದ್ಯಾರ್ಥಿಗಳಿಗೆ ಫಲಿತಾಂಶಕ್ಕೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಘಟನೆಯ ಕುರಿತು ಮಾಹಿತಿ ನೀಡಿ ಒಟ್ಟು 19 ಜನ ವಿದ್ಯಾರ್ಥಿಗಳಿಗೆ ಈ ಸಮಸ್ಯೆಯಾಗಿದ್ದು ಇದಕ್ಕೆ ಸಂಬಂಧಿಸಿದ ಎಲ್ಲಾ ಕೊಠಡಿ ಮೇಲ್ವಿಚಾರಕರಿಂದ ಒಪ್ಪಿಗೆ ಪತ್ರವನ್ನು ಬರೆಸಿ ಕೊಳ್ಳಲಾಗಿದೆ ಹಾಗೂ ಇದಕ್ಕೆ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾ ಉಪ ನಿರ್ದೇಶಕರು ಮತ್ತು ಸಿ.ಎಸ್ ಅವರಿಗು ಹಾಗು ಇತರೆ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ವಿದ್ಯಾರ್ಥಿಗಳ ಪೋಷಕರ ಗದ್ದಲದ ತಿಳಿದು ಸ್ಥಳಕ್ಕೆ ಸುರಪುರ ಠಾಣೆಯ ಪಿಎಸ್ಐ ಸೋಮಲಿಂಗಪ್ಪ ಒಡೆಯರ್ ಮತ್ತು ಅವರ ತಂಡ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ನವೋದಯದ ಕನಸನ್ನು ಹೊತ್ತು ಪರೀಕ್ಷೆಗೆ ಹಾಜರಾದ 19 ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಏರುಪೇರಾದರೆ ಏನು ಮಾಡುವುದು ಎಂಬ ಕೊರಗು ವಿದ್ಯಾರ್ಥಿ ಮತ್ತು ಅವರ ಪೋಷಕರಲ್ಲಿ ಎದ್ದು ಕಾಣುತ್ತಿತ್ತು.

3 Responses to "ನವೋದಯ ಪರೀಕ್ಷೆಯಲ್ಲಿ ಕೊಠಡಿ ಮೇಲ್ವಿಚಾರಕರ ಎಡವಟ್ಟು:ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು"

 1. Sister Benita Headmistress   April 6, 2019 at 7:08 pm

  Prerana School has given the building for novodaya exam sake no teachers of Prerana involved in it it’s the problem of outside room supervisor.Prerana School will never do such mistake.

  Reply
 2. Prerana   April 6, 2019 at 7:25 pm

  Prerana school building was given only for the exam teachers r not involved. … supervisors from outside

  Reply
 3. Francis   April 6, 2019 at 7:39 pm

  It’s really shocking to know how the responsible people become irresponsible in the future of our children.
  I know for sure that Prerana School is not responsible for this commotion. It is the Navodaya exam administrative board is responsible for such incidents. The people who are responsible must be punished with suspension from their work

  Reply

Leave a Reply

Your email address will not be published.