ರಾಜಕಾರಣ ವ್ಯಾಪರೀಕರಣವಾಗಿದೆ, ಅದೊಂದು ಕೆಲಸ ಮಾಡುವ ಉದ್ಯಮೆಯಾಗಬೇಕು: ಉಪೇಂದ್ರ

ಜನ ಬದಲಾವಣೆ ಬಯಸುತ್ತಿದ್ದಾರೆ ಪ್ರಜಾಕೀಯ ಪಕ್ಷದಿಂದ ಪ್ರಯತ್ನ : ಉಪೇಂದ್ರ

ಕೊಪ್ಪಳ: ರಾಜಕಾರಣ ಅನ್ನೂವುದು ಇಂದು ಸಂಪೂರ್ಣವಾಗಿ ಒಂದು ತರಹ ವ್ಯಾಪರೀಕರಣವಾಗಿದೆ, ಹಣ, ಹೆಸರು, ಪ್ರಭಾವ  ತೋಳಬಲ ಇಲ್ಲದೆ  ಚುನಾವಣೆ ಇಲ್ಲದ್ದಂತಾಗಿದ್ದು, ಇದರಿಂದ ಜನ ಸಂಪೂರ್ಣ ಬದಲಾವಣೆಯನ್ನು  ಬಯಸಿದ್ದಾರೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ಚಿತ್ರ ನಟ ಉಪೇಂದ್ರ ಹೇಳಿದರು.

ಅವರು  ಬಾನುವಾರ ಕೊಪ್ಪಳ ಲೋಕಸಭಾ  ಕ್ಷೇತ್ರದಲ್ಲಿ  ಪ್ರಜಾಕೀಯ  ಪಕ್ಷದ ಅಭ್ಯರ್ಥಿ ಶರಣಯ್ಯ ಬಂಡಿ  ಪರ ಪ್ರಚಾರದ ನಿಮಿತ್ಯ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಿಕಾ ಭವನದಲ್ಲಿ ನಡೆಸಿದ ಸುದಿಗೋಷ್ಠಿಯಲ್ಲಿ  ಮಾತನಾಡಿದ ಅವರು ನಾವು ನಾಯಕರೂ ಅಲ್ಲ, ಸೇವಕರೂ ಅಲ್ಲ, ನಿಮ್ಮಿಂದ ಸಂಬಳ ಪಡೆದು ಕೆಲಸ ಮಾಡುವ ಕಾರ್ಮಿಕರು, ಪ್ರಜೆಗಳ ಸೇವೆಗಾಗಿ ರಾಜಕೀಯಲ್ಲಿರುವ ಆಡಳಿತದ ಕೀಯನ್ನು ಪ್ರಜಾಗಳ ಕೈಯಲ್ಲಿ ನೀಡುವುದೆ  ಪ್ರಜಾಕೀಯ  ಪಕ್ಷದ ಉದ್ದೇಶವಾಗಿದೆ ಎಂದರು.

ಇಂದು  ರಾಜಕೀಯ ಎಂಬುದು ವ್ಯಾಪಾರದ ಉದ್ಯಮವಾಗಿದೆ. ಇದು ಅಳಸಿಹೋಗಬೇಕು, ಜನರ ಇಚ್ಚೆಯಂತೆ ನಡೆಯುವುದು ಮುಖ್ಯವೆಂದ ಅವರು ಗೆಲ್ಲುವುದಕ್ಕಾಗಿ  ಚುನಾವಣಾ  ಸಂದರ್ಭದಲ್ಲಿ  ಮಾತ್ರ  ಬರುವವನು ರಾಜಕಾರಣಿಗಳಾಗಿದ್ದು, ಪ್ರಜಾಕೀಯ ಉದ್ದೇಶ  ಗೆದ್ದ ನಂತರ ಪ್ರಜೆಗಳ ಸಂಪರ್ಕದಲ್ಲಿ ನೀರಂತರವಾಗಿ ಇರುವವನೇ  ಪ್ರಜಾಕಾರಣಿಯಾಗಿದ್ದಾನೆ. ಆದರೆ ಪ್ರಜೆಗಳಿಗಾಗಿ ಪ್ರಜಾಳಿಗೋಸ್ಕರ  ಚುನಾವಣೆ ಇಲ್ಲವಾಗಿದೆ. ಆದರೆ ಸಾಮಾನ್ಯ  ಜನರು ಕೂಡ  ಚುನಾವಣೆಗೆ  ಸ್ಪರ್ಧಿಸಿ ಪ್ರಜಾಪ್ರಭುತ್ವಕ್ಕೆ ಮರಳಿ ಹೋಗುವುದು ಪ್ರಜಾಕೀಯ  ಎಂದು ಹೇಳಿದರು.

ಪ್ರಪಂಚ ಯಾವತ್ತು  ಕೆಟ್ಟದ್ದಲ್ಲ. ಆದರೆ ಪ್ರಪಂಚದಲ್ಲಿರುವ ಶೇ.೨೦ ರಷ್ಟು ಕೆಟ್ಟ ರಾಜಕಾರಣಿಗಳಿಂದ ಪ್ರಪಂಚ  ಕೆಟ್ಟದ್ದಾಗಿ ಕಾಣುತ್ತದೆ.  ಆದರೆ ಯುವಕರು ಸತ್ಯದ ಕಡೆ ನಡೆದು  ಉತ್ತಮ ಪ್ರಜಾಪ್ರಭುತ್ವ  ಎಂಬುದು  ತೋರಿಸಬೇಕಾಗಿದೆ, ಪ್ರಜೆಗಳಿಂದ  ಪ್ರಜಾಪ್ರಭುತ್ವ ಬದಲಾಗಬೇಕಾಗಿದೆ. ಇದು  ಒಂದು ಎರಡು ದಿನಗಳಿಂದ  ಆಗುವ ಕೆಲಸವಲ್ಲ. ಪ್ರಜಾಕೀಯ ಪಕ್ಷದಿಂದ ಇದೊಂದು ಸಂಪೂರ್ಣ ಬದಲಾವಣೆಯ ಪ್ರಯತ್ನ ಇದಕ್ಕೆ ನಾಡಿನ ಎಲ್ಲಡೆ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯನ್ನು ಹೊರತು ಪಡಿಸಿ 27 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಾಕಲಾಗಿದೆ. ನಮ್ಮ ಅಭ್ಯರ್ಥಿಗಳ ಗೆಲುವಿಗೆ ನಾವು ಪ್ರಯತ್ನ ಮಾಡುತ್ತಿದ್ದೇವೆ, ಮುಂದೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ನಾನೂ ಸ್ಫರ್ಧೆ ಮಾಡುವದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ  ಪ್ರಜಾಕೀಯ ಪಕ್ಷದ ಅಭ್ಯರ್ಥಿ ಶರಣಯ್ಯ  ಬಂಡಿ ಉಪಸ್ಥಿತರಿದ್ದರು.

Leave a Reply

Your email address will not be published.