ಟೈಯರ್ ಬ್ಲಾಸ್ಟ್ ಆಗಿ‌ ನುಜ್ಜಾದ ಕಾರು: ಪ್ರಯಾಣಿಕರು ಪಾರು

ಬೆಳಗಾವಿ: ಟೈಯರ್ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾದ ಘಟನೆ ಇಲ್ಲಿನ ನಗರದ ಹೊರವಲಯದ ಮುಕ್ತಿಮಠದ ಸಮೀಪದ ಎನ್ ಎಚ್ 4 ನಲ್ಲಿ ನಡೆದಿದ್ದು, ಅದೃಷ್ಟವಶಾಹತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌.

ಮುಂಬೈಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಮುಕ್ತಿ ಮಠದ ಸಮೀಪ ಟೈಯರ್ ಬ್ಲಾಸ್ಟ್ ಆಗಿ ರಸ್ತೆ ವಿಭಜಗಕ್ಕೆ ಅಪ್ಪಳಿಸಿ ಎದುರಿಗೆ ಬರುತ್ತಿದ್ದ ಹಣ್ಣು ತುಂಬಿದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಏರ್ ಬ್ಯಾಗ್ ನಿಂದ ಎಲ್ಲರು ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿಯಲ್ಲಿದ್ದ ಹಣ್ಣುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಪೊಲೀಸರು ಭೇಟಿ‌ ನೀಡಿ ವಾಹನ ತೆರವು ಕಾರ್ಯಾಚರಣೆ ‌ನಡೆಸಿದ್ದಾರೆ.

ಈ ಸಂಬಂಧ ಕಾಕತಿ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published.