ಮನೆಯಲ್ಲಿ ಏರ್ ಕಂಡಿಷನ್ ಸ್ಪೋಟಗೊಂಡು ಮೂವರು ಸಾವು!

ಚನ್ನೈ: ಮನೆಯಲ್ಲಿ ಏರ್ ಕಂಡಿಷನ್ ಸ್ಪೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ದಾರುಣ ಸಾವನ್ನಪ್ಪಿದ ಘಟನೆ ತಮಿಳುನಾಡಿದ ತಿಂಡಿವಾನಂ ಸಮೀಪದ ಕಾವೇರಿಪಕ್ಕನ್ ನಲ್ಲಿ ನಡೆದಿದೆ.

ಮೃತರನ್ನು ರಾಜು(60) ಆತನ ಪತ್ನಿ ಹಾಗೂ 26 ವರ್ಷದ ಮಗ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಸಾರ್ಟ್ ಸರ್ಕ್ಯೂಟ್ ಸಂಭವಿಸಿ ಏರ್ ಕಂಡಿಷನ್ ಸ್ಪೋಟಗೊಂಡ ಬಳಿಕ ಬೆಡ್ ರೂಮ್ ನಲ್ಲಿ ಬೆಂಕಿ ಆವರಿಸಿ ಮೂವರು ಸಜೀವ ದಹನವಾಗಿದ್ದಾರೆ.

ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಅಗ್ನಿ ನಂದಿಸಿದ್ದಾರೆ. ಪೊಲೀಸರು ಮೃತ ದೇಹಗಳನ್ನು ಹೊರತ ತಗೆದು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.

Leave a Reply

Your email address will not be published.