ಅಥಣಿ ಕ್ಷೇತ್ರದಾದ್ಯಂತ ಚರ್ಚೆಗೆ ಗ್ರಾಸವಾದ ಶಾಸಕ ಮಹೇಶ ಕುಮಠಳ್ಳಿ ನಡೆ..!

ಬೆಂಗಳೂರು: ರೆಬೆಲ್ ಶಾಸಕ ರಮೇಶ ಜಾರಕಿಹೊಳಿ ಆಪ್ತ್ ಅಥಣಿ ಶಾಸಕ ಮಹೇಶ ಕುಮಠಳ್ಳಿ ನಡೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜೊತೆ ಕ್ಷೇತ್ರದ ಕಾರ್ಯಕರ್ತರ ಮಧ್ಯೆಯೂ ಗೊಂದಲ ಉಂಟು ಮಾಡಿದೆ.

ಲೋಕಸಭೆ ಚುನಾವಣೆಗೂ ಮುನ್ನ ಮುಂಬಯಿನಲ್ಲಿ ವಾಸ್ತವ್ಯ ಹುಡಿದ್ದ ರಮೇಶ ಜಾರಕಿಹೊಳಿ ಟೀಂ ನಲ್ಲಿ ಕಾಣಿಸಿಕೊಂಡಿದ್ದ ಮಹೇಶ ನಂತರ ರಮೇಶ ಜಾರಕಿಹೊಳಿ ಜೊತೆ ಅಂತರ ಕಾಯ್ದುಕೊಂಡಿದ್ದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ್ದರು. ಈಗ ಕುಂದಗೋಳ್ ಉಪಚುನಾವಣೆಯಲ್ಲೂ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದೂ ಕಾರ್ಯಕರ್ತರಿಗೆ ಹೇಳಿದ್ದರೂ ಸಹ ಇತ್ತಿಚೀನ ಶಾಸಕ ಮಹೇಶ ನಡೆ ತೀವ್ರ ಕುತೂಹಲ ಮೂಡಿಸಿದೆ.

ಕುಂದಗೋಳ್ ಪ್ರಚಾರದಲ್ಲಿ ಭಾಗಿಯಾಗಿದ್ದ ಶಾಸಕ ಮಹೇಶ ಧಿಡೀರ್ ಆಗಿ ಬೆಂಗಳೂರಿಗೆ ತೆರಳಿ ಇಂದು ರಮೇಶ ಜಾರಕಿಹೊಳಿ ಜೊತೆ ಚರ್ಚೆ ನಡೆಸಿದ್ದಾರೆ.

ಏತನ್ಮಧ್ಯೆ ಪ್ರಚಾರದಲ್ಲೂ ಭಾಗಿಯಾಗಿ, ಬಂಡಾಯದಲ್ಲೂ ಕಾಣಿಸಿಕೊಳ್ಳುತ್ತಿರುವ ಶಾಸಕ ಮಹೇಶ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಕ್ಷೇತ್ರದ ಜನರು ಮಾತನಾಡತೊಡಗಿದ್ದಾರೆ.

Leave a Reply

Your email address will not be published.