ಅಕ್ರಮವಾಗಿ ಶ್ರೀಗಂಧ ಸಾಗಾಟ: ಐವರ ಬಂಧನ


ಖಾನಾಪುರ: ತಾಲೂಕಿನ ಗೋದೋಳ್ಳಿ ಶಾಖೆಯ ಗುಂಡೊಳ್ಳಿ-ಜಂಗಮನಹಟ್ಟಿ ಅರಣ್ಯ ವಲಯದಲ್ಲಿ ಅಕ್ರಮವಾಗಿ ಶ್ರೀಗಂಧ ಮರ‌ ಸಾಗಿಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ25.500ಕೆಜಿ ಶ್ರೀಗಂಧ ಒಂದು ಬೈಕ್  ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ 7 ಜನ ಭಾಗಿಯಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಬಲೆ‌ ಬೀಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಸಹಾಯಕ ಅರಣ್ಯ ನಿರ್ದೇಶಕರಾದ ಎಂ.ಕೆ. ಪಾತ್ರೋಟ, ರತ್ನಾಕರ ಓಬಣ್ಣನವರ ಮಾರ್ಗದರ್ಶನದಲ್ಲಿ ಅರಣ್ಯ ಅಧಿಕಾರಿಗಳಾದ ಪ್ರಕಾಶ ಮರೆಪ್ಪನವರ, ಎಚ್ ಲೋಹಿತ್, ಸಂತೋಷ‌ ಹಿರೇಮಠ,ಮಂಜುನಾಥ ಗೌಡ್ರ, ಬಿ.ಎ. ಮಾಡಿಕ, ಪಿ.ಎಂ. ಬಾವಲೇಕರ್,ಅಜಯ ಭಾಸ್ಕರಿ‌ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published.