ಗುರುವಿನ ಉಪದೇಶ ಅಮೃತಕ್ಕೆ ಸಮ: ಶಿವಾಚಾರ್ಯ ಶ್ರೀ

ಗುರುವಿನ ಉಪದೇಶ ಅಮೃತಕ್ಕೆ ಸಮ: ಶಿವಾಚಾರ್ಯ ಶ್ರೀ
????????????????????????????????????

ಬೈಲಹೊಂಗಲ: ಗುರುವಿನ ಉಪದೇಶ ಅಮೃತಕ್ಕೆ ಸಮಾನವಾಗಿದೆ. ಗುರುವಿಗೆ ಸರಿಸಾಟಿಯಾಗಿ ಬೇರಾರು ಇಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿತು ಅವರ ಮಾರ್ಗದರ್ಶನದಲ್ಲಿ ನಡೆದು ಜೀವನ ಪಾವನ ಮಾಡಿಕೊಳ್ಳಬೇಕೆಂದು ಯಮಕನಮರಡಿ ಹುಣಸಿಕೊಳ್ಳಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ತಾಲೂಕು ಹಣ್ಣಿಕೇರಿ ಹಿರೇಮಠದ ಶ್ರೀ ಗುರು ಮಹಾಂತ ದೇವರ ಪಟ್ಟಾಧಿಕಾರ ಮಹೋತ್ಸವ ಹಾಗೂ ಶ್ರೀ ಸಿದ್ಧಾಂತ ಸಿಖಾಮನಿ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಲಿಂಗೈಕ್ಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಹಣ್ಣಿಕೇರಿ ಗ್ರಾಮದಲ್ಲಿ ಒಳ್ಳೆಯ ಸಂಸ್ಕಾರ ಬಿತ್ತಿದ್ದರಿಂದ ಇಲ್ಲಿ ಜನರು ಆಧ್ಯಾತ್ಮದತ್ತ ಆಸಕ್ತರಾಗಿರುವದನ್ನು ಕಾಣಬಹುದಾಗಿದೆ. ಈ ಸಂಪ್ರದಾಯ ಇದೇ ರೀತಿ ಮುಂದುವರೆದು ಇತರರಿಗೆ ಮಾದರಿಯಾಗಲಿ ಎಂದರು.

ದೊಡವಾಡ ಹಿರೇಮಠದ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಮುನುಷ್ಯ ಜನ್ಮದ ಸಾರ್ಥಕತೆಯಾಗಬೇಕಾದರೆ ಪ್ರತಿಯೊಬ್ಬರು ಗುರುವಿನ ಸೇವೆ ಮಾಡಬೇಕು. ಚಿಂತನೆ, ಆತ್ಮಾವಲೋಕನ ಮಾಡಿಕೊಳ್ಳಬೇಕು. ಪುರಾಣ, ಪ್ರವಚನಗಳನ್ನು ಆಲಿಸುವ ಮೂಲಕ ಒಳ್ಳೆಯ ಸಂಸ್ಕಾರ ಪಡೆಯಬೇಕು. ಗುರುಗಳ ಹಿತೋಪದೇಶಗಳು ಶಾಂತಿ, ಸಂಯಮದಿಂದ ಜೀವನ ನಡೆಸಲು ಪ್ರೇರಣೆಯಾಗುತ್ತವೆ ಎಂದÀರು.

ಲಿಂಗೈಕ್ಯ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳ ಉತ್ತರಾಧಿಕಾರಿಯಾಗಿ ಮಠದ ಪಟ್ಟಕ್ಕೇರುತ್ತಿರುವ ಮಹಾಂತ ದೇವರು ಶಿಸ್ತು, ಸರಳತೆ, ಸಾತ್ವಿಕತೆಯನ್ನು ಮೈಗೂಡಿಸಿಕೊಂಡವರು. ಅವರಿಂದ ಗ್ರಾಮದ ಹಾಗೂ ಶ್ರೀಮಠದ ಅಭಿವೃದ್ದಿ ಬಯಸಬಹುದಾಗಿದೆ ಎಂದರು.

ಸುಮಂಗಲೆಯರ ಕುಂಭ, ಆರತಿ, ಕಳಸ, ಭಜನೆ, ಡೊಳ್ಳು ಕುಣಿತದ ಮೆರವಣೆಗೆಯೊಂದಿಗೆ ಶ್ರೀ ಮಹಾಂತ ದೇವರನ್ನು ಶ್ರೀ ಮಠದ ಪಡದೇಶ್ವರ ವೇದಿಕೆಗೆ ಕರತರಲಾಯಿತು. ಅಲ್ಲದೇ ಭಕ್ತರಿಂದ, ಬೆಳ್ಳಿಯ ಕಿರೀಟ, ಬೆಳ್ಳಿಯ ತಾಟು, ಚೆರಿಗೆ ಮುಂತಾದ ವಸ್ತುಗಳನ್ನು ಶ್ರೀಗಳಿಗೆ ಅರ್ಪಿಸಲಾಯಿತು. ಶ್ರೀ ಮಹಾಂತ ದೇವರ ತುಲಾಭಾರ ನೇರವೇರಿಸಲಾಯಿತು.
ಪಟ್ಟಾಭಿಷಕ್ತರಾಗಲಿರುವ ಶ್ರೀ ಮಹಾಂತ ದೇವರು, ಸೋಗಲದ ಶ್ರೀ ಚಿದಾನಂದ ಅಜ್ಜನವರು, ಮದರಖಂಡಿಯ ಶ್ರೀ ಬಸಯ್ಯ ಶಾಸ್ರೀಗಳು ಹಾಗೂ ಶ್ರೀ ಮಠದ ಸದ್ಭಕ್ತರು ಉಪಸ್ಥತರಿದ್ದರು.

Leave a Reply

Your email address will not be published.