ಕಾಂಗ್ರೆಸ್ ಗೆ ಮತ ನೀಡಿದಕ್ಕೆ ಸೋದರ ಸಂಬಂಧಿ ಮೇಲೆ ಗುಂಡು ಹಾರಿಸಿದ!

ಚಂಡೀಗಢ: ಕಾಂಗ್ರೆಸ್ ಗೆ ಮತ ಚಲಾಯಿಸದಕ್ಕೆ ಸೋದರ ಸಂಬಂಧಿ ಮೇಲೆ ಗುಂಡು ಹಾರಿಸಿದ ಘಟನೆ ಹರಿಯಾಣದ ಜಜ್ಜರ್ ಜಿಲೆಯಲ್ಲಿ ನಡೆದಿದೆ.

ಜಜ್ಜರ್ ಜಿಲ್ಲಾ ಮಂಡಳ ಮಟ್ಟದ ಬಿಜೆಪಿ ಮುಖಂಡ ಧರ್ಮೆಂದರ್ ಸಿಲಾನಿ ಎಂಬಾತ ತನ್ನ ಸೋದರ ಸಂಬಂಧಿ ರಾಜ್ ಸಿಂಗ್ ಮೇಲೆ ಗುಂಡು ಹಾರಿಸಿದ್ದಾರೆ. ಚಂಡೀಗಢದಲ್ಲಿ ಭಾನುವಾರ ಮತದಾನ ನಡೆದಿದ್ದು, ರಾಜಾ ಸಿಂಗ್ ಬಿಜೆಪಿ ಬದಲು ಕಾಂಗ್ರೆಸ್ ಮತ ನೀಡಿದ್ದಾನೆ.

ರಾಜಾ ಸಿಂಗ್ ಕಾಂಗ್ರೆಸ್ ಗೆ ಮತ ನೀಡುವುದು ಧರ್ಮೆಂದರ್ ಸಿಂಗ್ ಗೊತ್ತಾಗಿದ್ದು, ಈ ವಿಷಯವಾಗಿ ಇಬ್ಬರು ಜಗಳವಾಡಿದ್ದಾರೆ. ಮರುದಿನ ಬೆಳಗ್ಗೆ(ಸೋಮವಾರ) ಧರ್ಮೆಂದರ್ ಲೈಸನ್ಸ್ ಇಲ್ಲದ ಗನ್ ನೊಂದಿಗೆ ರಾಜಾ ಸಿಂಗ್ ಮನೆಗೆ ತೆರಳಿ ಕಾಲು ಹಾಗೂ ಹೊಟ್ಟೆ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ತೀವ್ರಗಾಯಗೊಂಡಿದ್ದ ರಾಜಾ ಸಿಂಗ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತ ಧರ್ಮೆಂದರ್ ಸಿಂಗ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published.