ನಮೋ ನಮೋ ಹೊರಕ್ಕೆ “ಜೈಭೀಮ್” ಅಧಿಕಾರಕ್ಕೆ: ಮಾಯಾವತಿ

ಮಾವ್: ನಮೋ ನಮೋ ಅನ್ನು ಜನ ಹೊರಕ್ಕೆ ಕಳಿಸುತ್ತಾರೆ, ಜೈ ಭೀಮಗೆ ಅಧಿಕಾರ ನೀಡುತ್ತಾರೆ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಮಾವ್ ದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಆಢಳಿತಾರೂಢ ಬಿಜೆಪಿಗೆ ಜನ ಗೇಟ್ ಪಾಸ್ ನೀಡಲಿದ್ದಾರೆ. ಬಿಜೆಪಿ ಸೇರಿ ಎಲ್ಲ ವಿರೋಧ ಪಕ್ಷಗಳು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಸುಳ್ಳು, ಮತದಾರರನ್ನು ಓಲೈಸಸುವುದಷ್ಟೇ ಅವರ ಪ್ರಯತ್ನವಾಗಿದೆ. ಕಾಂಗ್ರೆಸ್ ನ ನ್ಯಾಯ್ ಯೋಜನೆಯೂ ಬಡತನ ನಿರ್ಮೂಲನೆ ಪರಿಹಾರವಾಗಲಾರದು. ಬಡತನ ನಿರ್ಮೂಲನೆ ಮಾಡಲು ಕಾಂಗ್ರೆಸ್ ಯಾವುದೇ ಶಾಸ್ವತ ಪರಿಹಾರ ಕಂಡುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಎಸ್ ಪಿ ಅಧಿಕಾರಕ್ಕೆ ಬಂದರೆ ಸಮಾಜದ ಅತಿ ಕಡುಬಡವರಿಗೂ ಸರಕಾರಿ ಹಾಗೂ ಸರ್ಕಾರೇತರ ವಲಯಗಳಲ್ಲಿ ಶಾಶ್ವತ ಉದ್ಯೋಗ ಕೊಡಿಸುವುದಾಗಿ ಹೇಳಿದ ಅವರು, ಬಿಜೆಪಿಯ ಅಚ್ಛೆ ದಿನ ಏನಾಯಿತು? ನಿಮಗೆಲ್ಲ ತಿಳಿದಿದೆ ಎಂದು ಟೀಕಿಸಿದರು.

Leave a Reply

Your email address will not be published.