ಚಿಂಚೋಳಿ, ಕುಂದಗೋಳದಲ್ಲಿ ಬಿಜೆಪಿಗೆ ಗೆಲುವು: ಬಿಎಸ್ ವೈ

ಕಲಬುರ್ಗ: ಮೇ 19 ರಂದು ನಡೆಯಲಿರುವ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು 25 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಸಾಧಿಸುತ್ತಾರೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ದೋಸ್ತಿ ಸರಕಾರದಲ್ಲಿ ಗೊಂದಲ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯಲ್ಲಿ ಒಬ್ಬರಿಗೊಬ್ಬರು ಚೂರಿ ಹಾಕಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಚುನಾವಣೆ ಫಲಿತಾಂಶದ ಬಳಿಕ ಇದು ಇನ್ನೂ ಹೆಚ್ಚಾಗಲಿದೆ. ಇವರ ಕಚ್ಚಾಟದಿಂದಾಗಿ ಬಿಜೆಪಿಯತ್ತ ಜನರ ಒಲವು ಎದ್ದು ಕಾಣುತ್ತಿದೆ ಎಂದು ಅವರು ಹೇಳಿಕೊಂಡರು.

ಕಾಂಗ್ರೆಸ್ಸಿಗೆ ಹೋಗಲು ಬಿಜೆಪಿಯವರಿಗೇನೂ ತಲೆ ಕೆಟ್ಟಿಲ್ಲ. ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾಣ ಗೆಲ್ಲುತ್ತಾರೆ ಎಂದು ತಾಕತ್ತಿದ್ದರೆ ವೇಣುಗೋಪಾಲ್ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

Leave a Reply

Your email address will not be published.