ಕುಡಿದು ವೇಗವಾಗಿ ಚಲಾಯಿಸುತ್ತಿದ್ದ ಕಾರು ಆಟೋಗೆ ಡಿಕ್ಕಿ: ಬಾಲಕನಿಗೆ ಗಂಭೀರ ಗಾಯ

ತುಮಕೂರು: ಕುಡಿದು ವೇಗವಾಗಿ ಚಲಾಯಿಸುತ್ತಿದ್ದ ಕಾರು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಬಾಲಕನ ಕಣ್ಣು ಮತ್ತು ತಲೆಗೆ ಗಂಭೀರ ಗಾಯಗೊಂಡ ಘಟನೆ ಇಂದು ಇಲ್ಲಿನ ಸಮೀಪದ ಹೆದ್ದಾರಿ 75ರ ತಾವರೆಕೆರೆ ಬಳಿ ನಡೆದಿದೆ.

ಬೆಂಗಳೂರು ಮಾರ್ಗದಿಂದ – ಕೋಲಾರ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕೆ.ಎ. 04, ಎಂ.ಸಿ.589 ಕಾರು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ 3-4 ಬಾರಿ ಆಟೋ ಪಲ್ಟಿ ಹೊಡೆದಿದೆ.

ಮುಖತಃ ಬೆಂಗಳೂರು ವಾಸಿಗಳಾದ ಆಟೋದವರು ಕೋಲಾರ ಮಾರ್ಗವಾಗಿ ಕುಟುಂಬ ಸಮೇತ ಚಲಿಸುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ.

ಕಾರಿನಲ್ಲಿ ಚಲಿಸುತ್ತಿದ್ದ ವ್ಯಕ್ತಿಗೆ ಸಣ್ಣ ಪುಟ್ಟ ಗಾಯ, ಆಟೋದಲ್ಲಿದ್ದ ಹುಡುಗನ ಎಡ ಕಣ್ಣಿಗೆ ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ.

ಘಟನೆ ನಡೆದ ಸ್ಥಳದಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗಿದ್ದರೂ ಸಹ ಲ್ಯಾನ್ಕೋ ಅವರು ವಾಹನ ಸಂಚಾರಕ್ಕೆ ಅನುವು ಮಾಡಿಕೊಡದೆ ಸ್ಥಳೀಯರ ಹಾಗೂ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾದರು.ನಂತರ ಸಾರ್ವಜನಿಕರು ರೊಚ್ಚಿಗೆದ್ದು ತರಾಟೆಗೆ ತೆಗೆದುಕೊಂಡ ನಂತರ ಇತರೆ ವಾಹನಗಳಿಗೆ ಅನುವು ಮಾಡಿಕೊಟ್ಟರು.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿದ್ದಾರೆ.

Leave a Reply

Your email address will not be published.