ಬ್ಯಾಂಕಿನಿಂದ್ ಡ್ರಾ ಮಾಡಿದ ಹಣ ಲೂಟಿ: ಸಿಸಿಟಿವಿಯಲ್ಲಿ ಖದೀಮರ ‘ಕೈಚಳಕ’ ಸೆರೆ

ಕಲಬುರಗಿ: ಬ್ಯಾಂಕಿನಿಂದ ಡ್ರಾ ಮಾಡಿ ಕಾರಿನಲ್ಲಿಟ್ಟಿದ್ದ ರೂ.3,85,000 ನಗದು ಕಳವಾಗಿರುವ ಘಟನೆ ಇಲ್ಲಿನ ಆಸಿಫ್‌ ಗಂಜ್‌ ಸಮೀಪದ ಲಾಡ್ಜ್‌ವೊಂದರ ಎದುರು ಸಂಭವಿಸಿದೆ. 

ಶಹಾಬಾದ್‌ ಸಮೀಪದ ಗೋಳಾ (ಕೆ) ಗ್ರಾಮದ ಮಾಣಿಕ್‌ ಬಾಬುರಾವ್‌ ಪಾಟೀಲ್‌ ಹಣ ಕಳೆದುಕೊಂಡಿರುವ ವ್ಯಕ್ತಿ. ತಮ್ಮ ಊರಿನಿಂದ ಕಾರಿನಲ್ಲಿ ಬಂದಿದ್ದ ಪಾಟೀಲ್‌ ನಗರದ ಆಸಿಫ್‌ ಗಂಜ್‌ ಸಮೀಪದ ಕರ್ಣಾಟಕ ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಿದ ಬಳಿಕ ಹಣವನ್ನು ಬ್ಯಾಗ್‌ನಲ್ಲಿರಿಸಿ, ತಮ್ಮ ಕಾರಿನ ಹಿಂಬದಿ ಸೀಟಿನಲ್ಲಿ ಬ್ಯಾಗ್‌ ಇರಿಸಿದ್ದರು. 

ಅಲ್ಲಿಂದ ಸ್ವಲ್ಪ ದೂರ ಬಂದು ಲಾಡ್ಜ್‌ವೊಂದರ ಎದುರಿನ ಪ್ರತಿಷ್ಠಿತ ಫೈನಾನ್ಸ್‌ಗೆ ಹೋಗಿ ಬರುವಷ್ಟರಲ್ಲಿ ಕಾರಿನ ಹಿಂಬದಿ ಕಿಟಕಿಯ ಗಾಜು ಒಡೆದಿರುವ ಕಳ್ಳರು ಹಣದ ಬ್ಯಾಗ್‌ ಲಪಟಾಯಿಸಿದ್ದಾರೆ. ಹಣ ಕಳವು ಮಾಡಿರುವ ಕಳ್ಳರು ಕಾರಿನ ಮುಂಭಾಗದ ಒಂದು ಟೈರ್‌ ಪಂಕ್ಚರ್‌ ಮಾಡಿದ್ದಾರೆ. ಹಣದ ಜೊತೆಗೆ ಬ್ಯಾಗಿನಲ್ಲಿದ್ದ ವಿವಿಧ ನಾಲ್ಕು ಬ್ಯಾಂಕ್‌ಗಳ ಚೆಕ್‌ಬುಕ್‌ಗಳು ಸಹ ಕಳುವಾಗಿವೆ ಎಂದು ಪಾಟೀಲ್‌ ಚೌಕ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. 

ಬ್ಯಾಂಕ್ ನಲ್ಲಿ ಮಾಣಿಕ್ ಪಾಟೀಲ್ ಹಣ ಡ್ರಾ ಮಾಡುವುದನ್ನು ಗಮನಿಸಿದ ಕಳ್ಳರು
ಕಾರ್ ಪಾರ್ಕ್ ಮಾಡಿದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರಿಂದ ದೃಷ್ಕೃತ್ಯ ನಡೆದಿದೆ.

ಸ್ಥಳಕ್ಕೆ ಎಸ್ಪಿ ಯಡಾ ಮಾರ್ಟಿನ್ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಕಳ್ಳರಿಗಾಗಿಪೊಲೀಸರು ಜಾಲ ಬೀಸಿದ್ದಾರೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.