ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ನೀರು ಪಾಲು !

ಸಿದ್ದಾಪುರ( ಉತ್ತರ ಕನ್ನಡ): ಈಜಲು ಹೋದ ಸಂದರ್ಭದಲ್ಲಿ ಇಬ್ಬರು ಹುಡುಗರು ನೀರು ಪಾಲಾಗಿರುವ ಘಟನೆ ತಾಲೂಕಿನ ಹಂಚಳ್ಳಿ ಬಳಿಯ ಅಘನಾಶಿನಿ ನದಿಯಲ್ಲಿ ಸಂಭವಿಸಿದೆ.

ಚಂದನ ಹೆಗಡೆ (14) ಹಾಗೂ ವೆಂಕಟೇಶ ಹೆಗಡೆ (19) ಮೃತರು. ನಾಲ್ವರು ಸ್ನೇಹಿತರು ಕೂಡಿ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.