ಕೃಷ್ಣಾ ನದಿಯ ಮಡಿಲು ಸ್ವಚ್ಛತಾ ಅಭಿಯಾನ

ಜಮಖಂಡಿ: ಸಮೀಪದ ರಬಕವಿ- ಬನಹಟ್ಟಿ ತಾಲೂಕಿನ ರಬಕವಿಯ ಕೃಷ್ಣಾ ನದಿಯಲ್ಲಿ ಇಂದು ಮುಂಜಾನೆ 7 ಘಂಟೆಗೆ ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ಸಂಯೋಗದೊಂದಿಗೆ ಕೃಷ್ಣಾ ನದಿಯ ಮಡಿಲು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ನೀವು ಬನ್ನಿ ರಾಷ್ಟ್ರ ಕಾರ್ಯಕ್ಕೆ ಒಂದಾಗಿ ನಾವು ಕುಡಿಯುವ ಕೃಷ್ಣಾನದಿಯ ಮಡಿಲನ್ನು ಸ್ವಚ್ಛಗೊಳಿಸೋಣ ಅಭಿಯಾನಕ್ಕೆ ಸ್ವಯಂ ಪ್ರೇರಿತ ಸಂಕಲ್ಪ ತೊಟ್ಟು ತರುಣರು ಭಾಗಿಯಾಗಿದ್ದರು.

ಕೃಷ್ಣಾ ನದಿಯ ನೀರು ಮುಂದೆ ಸಾಗಿ ಹಿಪ್ಪರಿಗಿ ಚಿಕ್ಕಪಡಸಲಗಿ ಆಲಮಟ್ಟಿ ಡ್ಯಾಂ ಅವರಿಗೆ ಕುಡಿಯವ ನೀರು ಸಾಗುತ್ತದೆ. ಅದ್ದರಿಂದ ನಾವು ಮತ್ತು ನಮ್ಮ ಜಾನವಾರುಗಳಿಗೆ ಕುಡಿಯುವ ನೀರು ನಾವು ಎಲ್ಲರೂ ಸದಸ್ಯರು ಸೇರಿ ಸ್ವಚ್ಛವಾಗಿ ಇಟ್ಟುಕೊಳ್ಳುವ ಎಂದು ಶಿವಾನಂದ ಗಾಯಕವಾಡ ತಿಳಿಸಿದರು.

ಇದೇ ಸಂದರ್ಭದಲ್ಲಿ ಸ್ವದೇಶಿ ಜಾಗಣ ಮಂಚ್ ಕರ್ನಾಟಕ ಸದಸ್ಯರು ಮತ್ತು ನಗರಸಭೆ ಅಧಿಕಾರಿಗಳು ರಬಕವಿ ಬನಹಟ್ಟಿ ರಾಂಪುರ ಹೊಸೂರು ಗ್ರಾಮಗಳಿಂದ ಸಾಕಷ್ಟು ಯುವಕರು ಸ್ವಚ್ಚತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

Leave a Reply

Your email address will not be published.