35ನೇ ರಾಜ್ಯ ಪತ್ರಕರ್ತರ ಸಮ್ಮೇಳನ: ವಿವಿಧ ಉಪಸಮಿತಿಗಳ ರಚನೆ

35ನೇ ರಾಜ್ಯ ಪತ್ರಕರ್ತರ ಸಮ್ಮೇಳನ: ವಿವಿಧ ಉಪಸಮಿತಿಗಳ ರಚನೆ

ಕೊಪ್ಪಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ 35ನೇ ಸಮ್ಮೇಳನ ಕೊಪ್ಪಳ ಜಿಲ್ಲೆಯಲ್ಲಿ ನಡೆಸಲು ರಾಜ್ಯ ನಿರ್ಣಯ ಕೈಗೊಂಡಿರುವ ಹಿನ್ನಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ಎಂ.ಸಾದಿಕ್‌ಅಲಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಜರುಗಿಸಿ ಸಮ್ಮೇಳನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.

ನಗರದ ಪತ್ರಿಕಾ ಭವನದಲ್ಲಿ ಬುಧವಾರದಂದು ನಡೆದ ಸಭೆಯಲ್ಲಿ ಬರುವ ಸಪ್ಟೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ 35ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ನಿರ್ಣಯ ಕೈಗೊಳಲಾಯಿತು. ಸಮ್ಮೇಳನದ ಸಂದರ್ಭದಲ್ಲಿ ಸಂಘದ ವತಿಯಿಂದ ಪತ್ರಿಕಾ ಭವನ ನಿರ್ಮಾಣ ಕಾಮಗಾರಿಗೆ ಕೈಗೊಳ್ಳಲು ಅಗತ್ಯ ಎಲ್ಲಾ ವ್ಯವಸ್ಥೆ ಕೈಗೊಳ್ಳಲು ಉಪಸಮಿತಿ ರಚಿಸಿ ಕಾರ್ಯನಿರ್ವಹಣೆ ಜವಾಬ್ದಾರಿ ನೀಡಲಾಯಿತು.

ಹಿರಿಯ ಪತ್ರಕರ್ತ ಸಿದ್ಧನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಉಪ ಸಮಿತಿಯಲ್ಲಿ ಮೌಲಾ ಹುಸೇನ್ ಬುಲ್ಡಿಯಾರ್, ರಾಜು ಬಿ.ಆರ್. ಹೆಚ್.ವಿ.ರಾಜಾಬಕ್ಷಿ ಮತ್ತು ನಾಗರಾಜ್ ಅವರನ್ನು ಸದಸ್ಯರನ್ನಾಗಿ ನೇಮಿಸಿ ಒಟ್ಟು ಐದು ಜನರ ಉಪ ಸಮಿತಿ ತಂಡ ನಿಯೋಜಿಸಲಾಯಿತು.

ಅದರಂತೆ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಿದ್ಧತೆ ಕಾರ್ಯನಿರ್ವಹಣೆಯ ಉಪಸಮಿತಿಗೆ ಸಿರಾಜ್ ಬಿಸರಳ್ಳಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿ,  ಶಿವರಾಜ್ ನುಗಡೋಣಿ, ಬಸವರಾಜ್ ಕರ್ಕಿಹಳ್ಳಿ, ಖಲೀಲ್ ಹುಡೇವ್ ಮತ್ತು ರವಿಕುಮಾರ್ ಅವರನ್ನು ಉಪ ಸಮಿತಿಯ ಸದಸ್ಯ ತಂಡ ರಚಿಸಲಾಯಿತು.

ಸಮ್ಮೇಳನದ ಸಿದ್ಧತೆ ಕುರಿತು ಶೀಘ್ರ ಸಂಘದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿರುವ ಸಂಜೀವ್‌ರಾವ್ ಕುಲಕರ್ಣಿ ಅವರು ಜಿಲ್ಲೆಗೆ ಭೇಟಿ ನೀಡಲಿದ್ದು, ಸಮ್ಮೇಳನಕ್ಕೆ ಸ್ಥಳ ನಿಗದಿ ಪಡಿಸಲಾಗುವುದು, ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಜಿಲ್ಲಾ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಸಮಾಲೋಚನೆ ಸಭೆ ನಡೆಸಿ ಸಮ್ಮೇಳನದ ಸಿದ್ಧತೆ ನಡೆಸಲಾಗುವುದು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ ತಿಳಿಸಿದರು.  ಸಭೆಯಲ್ಲಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಜಿ.ಎಸ್.ಗೋನಾಳ, ರಾಜ್ಯ ನಾಮಕರಣ ಸದಸ್ಯ ಹರೀಶ್ ಹೆಚ್.ಎಸ್. ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published.