ಗಂಗಾವತಿ ದುರ್ಗಮ್ಮಹಳ್ಳ ಸ್ವಚ್ಛತೆಗೆ ಅಭಿಯಾನ : ವಿವಿಧ ವಾರ್ಡ್‌ಗಳಲ್ಲಿ ಗೀತಗಾಯನದ ಮೂಲಕ ಜಾಗೃತಿ

-ಕೊಪ್ಪಳ : ಜಿಲ್ಲೆಯ ಗಂಗಾವತಿ ನಗರದ ದುರ್ಗಮ್ಮಹಳ್ಳ ಸ್ವಚ್ಛತಾಭಿಯಾನ ಮುಂದುವರೆದಿದ್ದು,  ಎರಡನೇ ಹಂತವಾಗಿ ವಿವಿಧ ವಾರ್ಡ್‌ಗಳಲ್ಲಿ ಗೀತಗಾಯನದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ, ಜನ ಜಾಗೃತಿ ಮೂಡಿಸಲಾಯಿತು.

ನಮ್ಮ ಊರು ನಮ್ಮ ಹಳ್ಳ ಪರಿಕಲ್ಪನೆಯಡಿಯಲ್ಲಿ ನಗರದ ಸಮಾನ ಮನಸ್ಕರನ್ನೊಳಗೊಂಡ ವಿವಿಧ ಸಂಘಟನೆಗಳ ಸದಸ್ಯರು ಮಂಗಳವಾರ ದುರ್ಗಮ್ಮಹಳ್ಳ ಸ್ವಚ್ಛತೆಗೆ ಶ್ರಮದಾನ ಹಮ್ಮಿಕೊಂಡಿದ್ದರು. ನಿರಂತರ ೧೦ ದಿನ ಹಳ್ಳದಲ್ಲಿನ ಪ್ಲಾಸ್ಟಿಕ್ ಮತ್ತು ಕರಗದ ವಸ್ತುಗಳನ್ನು ಹೊರ ಸಾಗಿಸಿದರು. ಗ್ರಂಥಪಾಲಕ ರಮೇಶಗಬ್ಬೂರು ನೇತೃತ್ವದ ತಂಡ ಸ್ವಚ್ಛತೆ ಗಾಯನದೊಂದಿಗೆ ಗಮನಸೆಳೆದರು.

ದುರ್ಗಮ್ಮಹಳ್ಳ ಸ್ವಚ್ಛತೆಗೆ ಸರ್ಕಾರದಿಂದ ಅನುದಾನ ಬಂದರೂ, ಸಾರ್ವಜನಿಕರಲ್ಲಿ ಜಾಗೃತಿ ಮೂಡುವರಿಗೂ ಹಳ್ಳ ಸ್ವಚ್ಛವಾಗುವುದಿಲ್ಲ. ಹೀಗಾಗಿ ಎರಡನೇ ಹಂತದಲ್ಲಿ ಜಾಗೃತಿ ಗೀತೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಅಭಿಯಾನದ ಸಂಚಾಲಕ ಡಾ.ಶಿವಕುಮಾರ ಮಾಲಿ ಪಾಟೀಲ್ ಹೇಳಿದರು.

ವಿವಿಧ ಸಂಘಟನೆಗಳ ಮುಖಂಡರಾದ ಕೆ.ಬಸವರಾಜ, ಸಲೀಂಭಾಗವಾನ್, ಡಾ.ಶಿವಾನಂದ ಬಾವಿಕಟ್ಟಿ, ಚನ್ನುಪಾಟಿ ಪ್ರಭಾಕರ, ಸಂದೇಶಕುಮಾರ, ಸಂಗಪ್ಪ ಘಾಜಿ, ಉಲ್ಲಾಸ ಕೊಬ್ಬಜ್ಜಿ, ಕೆ.ಶರಭಣ್ಣ ಇತರರಿದ್ದರು. ಹಳ್ಳದ ಸ್ವಚ್ಛಾತಾ ಕಾರ್ಯಕ್ಕೆ ಜನ ಸಮುದಾಯದಿಂದ ಉತ್ತಮ್ಮ ಪ್ರತಿಕ್ರಿಯೇಯು ವ್ಯಕ್ತವಾಗಿದ್ದು, ಎರಡನೇ ಹಂತದಲ್ಲಿ ಅಭಿಯಾನಕ್ಕೆ ಉತ್ತೇಜನವನ್ನು ನೀಡಿದೆ.

Leave a Reply

Your email address will not be published.