ಜಾನುವಾರುಗಳೊಂದಿಗೆ ತಹಸೀಲ್ದಾರ್ ಕಚೇರಿ ಮುತ್ತಿಗೆ ಹಾಕಿದ ರೈತರು!

ಮಧುಗಿರಿ: ಜಾನುವಾರುಗಳಿಗೆ ಮೇವು ಹಾಗೂ ನೀರು ಒದಗಿಸಲು ಅಧಿಕಾರಿಗಳು ಅಸಹಾಯಕರಾಗಿದ್ದಾರೆಂದು ಆರೋಪಿಸಿ ಬಸವನಹಳ್ಳಿ ಗ್ರಾಮದ ರೈತರು ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಯ ಮುಂದೆ ಜಾನುವಾರಗಳನ್ನು ಕರೆತಂದು ಕೆಲಹೊತ್ತು ಪ್ರತಿಭಟಿಸಿದರು.

ತಾಲ್ಲೂಕಿನ ಕಸಬ ಹೋಬಳಿಯ ಬಸವನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಗಳಲ್ಲಿನ ಜಾನುವಾರುಗಳಿಗೆ ಮೇವು ಬದಗಿಸಿಕೊಡುತ್ತೆವೆಂದು ಕಳೆದ ಎರಡು ತಿಂಗಳಿನಿಂದ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮೇವಿಲ್ಲದೆ ಜಾನುವಾರುಗಳು ಸಾವು ನೋವು ಅನುಭವಿಸುತ್ತಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ. ಅಧಿಕಾರಿಗಳು ಮೇವು ಮತ್ತು ನೀರನ್ನು ಒದಗಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಗ್ರಾಮಸ್ಥ ಶಿವಲಿಂಗಪ್ಪ ಮಾತನಾಡಿ ಈಗಾಗಲೇ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ಸರ್ಕಾರಿ ಕೊಳವೆ ಬಾವಿಯೊಂದನ್ನು ಕೊರೆಸಿದ್ದು ಬೋರ್ ವೆಲ್ ನಲ್ಲಿ ನೀರು ಸಹ ದೊರೆಕಿದೆ ಆದರೆ ಇದೂವರೆವಿಗೂ ಬೋರ್ ವೆಲ್‍ಗೆ ಪಂಪ್ ಮೋಟಾರ್ ಆಳವಡಿಸದೆ ಕೆಲ ಅಧಿಕಾರಿಗಳು ಖಾಸಗಿಯವರ ಜೊತೆ ಶಾಮೀಲಾಗಿ ನೀರಿನ ವಿಚಾರದಲ್ಲಿ 15 ಸಾವಿರ ಹಣ ಬಾಡಿಗೆ ನೀಡುತ್ತಾ ಸರಕಾರದ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಹಶೀಲ್ದಾರ್ ರಮೇಶ್ ಬಾಬು ಮನವಿ ಪತ್ರ ಸ್ವೀಕರಿಸಿ ಮಾತನಾಡಿ ನಾಳೆ ಬೆಳಗ್ಗೆ 12 ಗಂಟೆಯೊಳಗೆ ಮೇವು ವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಗ್ರಾಮದಲ್ಲಿನ ಬೋರ್ ವೆಲ್‍ನ ಬಗ್ಗೆ ಇಲಾಖಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಬಿ.ಹೆಚ್. ಮಂಜು, ಸಣ್ಣ ಮಲ್ಲಯ್ಯ, ರಂಗನಾಥ, ನಾಗರಾಜು, ಎಂ.ನಾಗಭೂಷಣ, ಮಲ್ಲಯ್ಯ, ಶಿವಕುಮಾರ್,ದೊಡ್ಡಮಲ್ಲಯ್ಯ, ಪಾಪಯ್ಯ, ಕಮಲಮ್ಮ, ನಾಗಮ್ಮ, ಮತ್ತಿತರರು ಇದ್ದರು.

Leave a Reply

Your email address will not be published.