ಕೆಂಚಮಾರಯ್ಯ ಹಠಾವೋ ಕಾಂಗ್ರೆಸ್ ಬಚಾವೋ ಎಂದ ಶಂಕರಪ್ಪ

ಮಧುಗಿರಿ: ಕಾಂಗ್ರೆಸ್ ಬಚಾವೋ ಕೆಂಚಮಾರಯ್ಯ ಹಠಾವೋ ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿಯಬೇಕಾದರೆ ಇಂಥ ಶಕುನಿಯನ್ನ ಮೊದಲು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಣೆಗಾರ ತಾಲೂಕು ಮಹಾಸಭಾ ಸಂಘದ ಅಧ್ಯಕ್ಷ ಎಸ್.ವಿ. ಶಂಕರಪ್ಪ ಸಂಜೀವಪುರ ನೇರವಾಗಿ ಆರೋಪಿಸಿದ್ದಾರೆ.

ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐ ಡಿ ಹಳ್ಳಿ ಜಿಪಂ ಸದಸ್ಯ ಹೆಚ್ ಕೆಂಚಮಾರಯ್ಯ ಉಂಡ ಮನೆಗೆ ದ್ರೋಹ ಬಗೆದಂತಹ ವ್ಯಕ್ತಿ. 2004ರ ವಿಧಾನಸಭಾ ಕ್ಷೇತ್ರದ ಚನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಇದೇ ಡಿಸಿಎಂ ಪರಮೇಶ್ವರ್ ವಿರುದ್ಧ ಸೋಲು ಕಂಡು ರಾಜಕೀಯದಲ್ಲಿ ಮೂಲೆ ಗುಂಪಾಗಿದ್ದರು.

ಶಿಕ್ಷಣ ಇಲಾಖೆಯಲ್ಲಿ ನೌಕರಿ ಮಾಡಿ ಸ್ವಯಂ ನಿವೃತ್ತಿ ಪಡೆದಿದ್ದಂತಹ ವ್ಯಕ್ತಿಗೆ ಈ ಮೊದಲು ಮಧುಗಿರಿ ತಾಲ್ಲೂಕಿನ ಪರಿಚಯವೇ ಇರಲಿಲ್ಲ. ಈಗಿನ ಮಧುಗಿರಿಯ ಜೆಡಿಎಸ್ ಶಾಸಕ ವೀರಭದ್ರಯ್ಯ ನವರ ಜೊತೆ ನಂಟು ಮುಂದುವರೆಸಿಕೊಂಡು ಬಂದು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಿದ್ದ. ಆತನಿಗೆ ಕಾಂಗ್ರೆಸ್ ಪಕ್ಷದ ನಿಯತ್ತು ಇಲ್ಲ. ಇಂತಹವರಿಂದ ಜಿಲ್ಲೆ ಮತ್ತು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗಿದದೆ. ಜೆಡಿಎಸ್ ಕಾಂಗ್ರೆಸ್ ಪಕ್ಷಗಳ ಮೈತ್ರಿಯ ಚುನಾವಣೆ ಫಲಿತಾಂಶದ ಮೊದಲ ಕಿರೀಟ ಇವರಿಗೆ ಹಿಡಬೇಕು ಎಂದು ವ್ಯಂಗ್ಯವಾಡಿದರು.

ಮಾಜಿ ವಿಧಾನಪರಿಷತ್ ಮತ್ತು ವಿಧಾನಸಭಾ ಸದಸ್ಯರಾಗಿದ್ದ ಕೆ.ಎನ್. ರಾಜಣ್ಣ ನವರು ಮಧುಗಿರಿ ವಿಧಾನಸಭಾ ಅಭ್ಯರ್ಥಿಯಾಗಿ 2008 ರಲ್ಲಿ ಸ್ಪರ್ಧೆ ಮಾಡಿದ್ದರು. ಕೆ.ಎನ್.ಆರ್ 2014ರಲ್ಲಿ ಶಾಸಕರಾಗಿ ಆಯ್ಕೆ ಆದ ಮೇಲೆ ಮೂಲೆ ಗುಂಪಾಗಿದ್ದ ಹಾಗೂ ಗ್ರಾಪಂಗೂ ಸ್ಪರ್ಧಿಸಲೂ ಯೋಗ್ಯತೆ ಇಲ್ಲದ ಕೆಂಚಮಾರಯ್ಯನನ್ನು ಮಿಡಿಗೇಶಿ. ಐ.ಡಿ. ಹಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯರಾನ್ನಾಗಿ ಮಾಡಿ ನಂತರ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕನಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಆದರೆ ಉಂಡಾ ಮನೆಗೆ ದ್ರೋಹ ಮಾಡಿ ಅಧಿಕಾರ ಅನುಭವಿಸಿದ್ದರು.

ಇದೇ ವ್ಯಕ್ತಿ ನಮ್ಮ ಸಮಾಜವನ್ನು ನಾಣ್ಯ (ಮಣೆಗಾರ) ಆವನಾಣ್ಯ (ಮಣಿಗಾರ) ಎಂಬಂತೆ ಎರಡು ಭಾಗ ಮಾಡಿ ಜಾತಿ ವಾದಿಯಾಗಿದ್ದಾನೆ. ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶಾಸಕ ವೀರಭದ್ರಯ್ಯನವರ ಬಳಿ ಸಮೂದಾಯದ ಹೆಸರಿನಲ್ಲಿ ಸುಮಾರು 50 ಲಕ್ಷ ರೂ ಹಣ ಪಡೆದಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್‍ನಿಂದ ಟಿಕೆಟ್ ಪಡೆದು ಐ ಡಿ ಹಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಸ್ವ ಪಕ್ಷದ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಮಾಡಿದ್ದು ಇವರೆ ಕೆ.ಎನ್. ರಾಜಣ್ಣ ನವರ ಸೋಲಿಗೆ ಕಾರಣವಾಗಿದ್ದಾನೆ ಆದ್ದರಿಂದ ನಮ್ಮ ಸಮಾಜದವರು ಯಾರು ಇತನನ್ನು ಗೌರವಿಸ ಬಾರದು ಮೂಲ ತಾಲ್ಲೂಕು ಸಿರಾ ಕಡೆಗೆ ಓಡಿಸಿ ಬಿಡಾಬೇಕು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮಣೆಗಾರ ಮಹಾಸಭಾ ಕಾರ್ಯಧ್ಯಕ್ಷ ಕಂಬಣ್ಣ, ಪ್ರಧಾನ ಕಾರ್ಯದರ್ಶಿ ಎಂ . ಆರ್.ನಾಗರಾಜು, ರವಿಶಂಕರ್, ಮೂರ್ತಿ, ಮರುವೇಕೆರೆ ರಂಗನಾಥ್. ಶಿವಣ್ಣ, ರಂಗಪ್ಪ, ನರಸಿಂಹಮೂರ್ತಿ, ಕೊಟೆಕಲ್ಲಪ್ಪ, ರಾಮದಾಸು ಮತ್ತಿತರರು ಇದ್ದರು.

Leave a Reply

Your email address will not be published.