ಎಂ.ಕೆ. ಹುಬ್ಬಳ್ಳಿ ಪ.ಪಂಚಾಯಿತಿ ಸದಸ್ಯರ ವಿರುದ್ಧ ಭುಗಿಲೆದ್ದ ಆಕ್ರೋಶ: ಊರು ಬಿಟ್ಟು ಪರಾರಿಯಾದ ಸದಸ್ಯರು

ಕಿತ್ತೂರು: ನೀರಿದ್ದರು ಬರಗಾಲ ಎಂದು ತೋರಿಸಿ ಹಣ ಎತ್ತಲು ಮುಂದಾದ
ಎಂ.ಕೆ ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಸದಸ್ಯರ ವಿರುದ್ಧ ಗ್ರಾಮಸ್ಥರು ಧಿಕ್ಕಾರ ಕೂಗಿ ಸದಸ್ಯರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಬೋರ್ ಬೆಲ್ ಗಳಲ್ಲಿ ನೀರಿದ್ದರು ಬೋರ್ ಬಂದ್ ಮಾಡಿ ಗ್ರಾಮದಲ್ಲಿ ನೀರಿಲ್ಲ ಎಂದು ಸರ್ಕಾರದಿಂದ ಹಣ ಎತ್ತಲು ಸದಸ್ಯರು ಮುಂದಾಗಿದ್ದಾರೆ.

ಬೋರ್ ವೆಲ್ ಬಂದ್ ಮಾಡಿ ಜನರಿಗೆ ಯಾಮಾರಿಸುತ್ತಿದ್ದ ಸದಸ್ಯರನ್ನ ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು. ನೀರಿದ್ದರು ಬಂದ್ ಮಾಡಿದ್ದಕ್ಕೆ ಆಕ್ರೋಶಗೊಂಡು ಪಟ್ಟಣ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಏತ್ನಮಧ್ಯೆ 14 ಪಟ್ಟಣ ಪಂಚಾಯಿತಿ ಸದಸ್ಯರು ಪರಾರಿಯಾಗಿದ್ದು, ಸ್ಥಳಕ್ಕೆ ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರ ಭೇಟಿ ನೀಡಿದ್ದಾರೆ.

ಪ್ರತಿಭಟನಾ ನಿರತ ಗ್ರಾಮಸ್ಥರನ್ನ ಕಳುಹಿಸಲು ಪೊಲೀಸರ ಹರಸಾಹಸಪಡುತ್ತಿದ್ದಾರೆ.
ಸ್ಥಳದಲ್ಲಿ ಬಿಗುವಿಣ ವಾತಾವರಣ ಮನೆ ಮಾಡಿದೆ.

ಸದಸ್ಯರು ಸ್ಥಳಕ್ಕೆ ಬರುವಂತೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ನಿಯೋಜಿಸಲಾಗಿದೆ.

Leave a Reply

Your email address will not be published.