ಮೋದಿ ಕೋಟೆಯಲ್ಲಿ ಪ್ರಿಯಾಂಕಾ ರೋಡ್ ಶೋ ಗೆ ಕ್ಷಣಗಣನೆ…!

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಪುನರಾಯ್ಕೆ ಬಯಸಿ ಕಣಕ್ಕಿಳಿದಿರುವ ವಾರಾಣಸಿಗೆ ಲಗ್ಗೆ ಇಟ್ಟಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ರೋಡ್ ಶೋಗೆ ಕ್ಷಣಗಣನೆ ಆರಂಭವಾಗಿದೆ.

ಮೋದಿ ಕೋಟೆಯಲ್ಲಿ ಬಿಎಚ್ ಯು ಗೇಟ್ ನಿಂದ ರೋಡ್ ಶೋ ಆರಂಭಿಸಲಿರುವ ಪ್ರಿಯಾಂಕಾ 5 ಕಿ. ಮೀ ದೂರದವರೆಗೆ ಪ್ರಚಾರ ನಡೆಸಲಿದ್ದಾರೆ. ವಿಶ್ವನಾಥಮಂದಿರದ ಬಳಿ ರೋಡ್ ಶೋ ಕೊನೆಗೊಂಡ ನಂತರ ಸಂಜೆ 5 ಗಂಟೆಗೆ ಅವರು ಭರ್ಜರಿ ಪ್ರಚಾರ ಭಾಷಣ ಮಾಡುವರು.

ಮೋದಿ ರೋಡ್ ಶೋ ನಡೆಸಿದ ಮಾರ್ಗದಲ್ಲಿಯೇ ಪ್ರಿಯಾಂಕಾ ಕೂಡ ರೋಡ್ ಶೋ ನಡೆಸುತ್ತಿರುವುದು ಗಮನ ಸೆಳೆದಿದೆ.

Leave a Reply

Your email address will not be published.