ದಾಖಲೆಗಳಿದ್ದರೂ ಚಾಲಕನಿಗೆ ಕಿರಿಕಿರಿ: ಕೈ ಮುಗಿದು ಕ್ಷಮೆ ಕೇಳಿದ ಪೊಲೀಸರ ವಿಡಿಯೋ ವೈರಲ್!

ಧಾರವಾಡ: ವಾಹನ ದಾಖಲೆ ಪರಿಶೀಲನೆ ವೇಳೆ ಚಾಲಕನಿಗೆ ಟ್ರಾಫಿಕ್ ಪೊಲೀಸರು ಕಿರಿಕಿರಿ ಮಾಡಿದ್ದು, ಆತ ಪತ್ನಿ,ಮಗುವಿನೊಂದಿಗೆ ರಸ್ತೆ ಮೇಲೆ ಕುಳಿತು ಪ್ರತಿಭಟನಡೆಸಿದ ಘಟನೆ ನಡೆದಿದೆ.

ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಧಾರವಾಡ ನಗರದ ಕಲಗೇರಿ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಚಾಲಕನೊಬ್ಬನನ್ನು ತಡೆದು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಆದರೆ ದಾಖಲೆ ಪರಿಶೀಲನೆ ಬಳಿಕವೂ ಪೊಲೀಸರು ತನಗೆ ಕಿರಿಕಿರಿ ಮಾಡಿದ್ದಾರೆ ಎಂದು ಆರೋಪಿಸಿ ಚಾಲಕ ಪ್ರತಿಭಟನೆ ನಡೆಸಿದ್ದಾರೆ.

ಕೊನೆಗೆ ಪೊಲೀಸರು ಚಾಲಕನಿಗೆ ಕೈ ಮುಗಿದು ಕ್ಷಮೆ ಕೇಳಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಪೊಲೀಸರ ನಡೆಗೆ ಸಾರ್ವಜನಿಕರು ಕಿಡಿಕಾರಿದ್ದಾರೆ. ದಾಖಲೆ ಪರಿಶೀಲನೆ ಬಳಿಕ ಪೊಲೀಸರು ಹಣ ಕೇಳಿರಬಹುದು ಅದಕ್ಕಾಗಿ ಚಾಲಕ ಪ್ರತಿಭಟನೆ ನಡೆಸಿದ್ದಾನೆ ಎನ್ನಲಾಗುತ್ತಿದೆ.

Leave a Reply

Your email address will not be published.