ಸುಳ್ಳು ಸಮೀಕ್ಷೆಗಳಿಂದ ನಿರಾಶರಾಗಬೇಡಿ, ಎಚ್ಚರದಿಂದಿರಿ: ಕೈ ಕಾರ್ಯಕರ್ತರಿಗೆ ರಾಹುಲ್ ಸಲಹೆ

ಹೊಸದಿಲ್ಲಿ: ಸುಳ್ಳು ಚುನಾವನೋತ್ತರ ಸಮೀಕ್ಷೆಗಳಿಂದ ನಿರಾಶರಾಗಬೇಡಿ ಎಚ್ಚರದಿಂದಿರಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ ಗಾಂಧಿ ಕೈ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

ಲೋಕಸಭೆ ಫಲಿತಾಂಶಕ್ಕೂ ಮುನ್ನ ಟ್ವೀಟ್ ಮೂಲಕ ಕಾರ್ಯಕರ್ತರಿಗೆ ಮನವಿ ಮಾಡಿರುವ ರಾಹುಲ್ ” ಮುಂದಿನ 24 ಘಂಟೆಗಳು ಅತ್ಯಂತ ಮಹತ್ವದ್ದಾಗಿವೆ. ದೃತಿಗೇಡದೆ ಎಚ್ಚರದಿಂದಿರಿ. ನೀವು ಸತ್ಯದ ಸಲುವಾಗಿ ಹೋರಾಟ ನಡೆಸುತ್ತಿದ್ದೀರಾ, ಸುಳ್ಳು ಸಮೀಕ್ಷೆಗಳು ಮತ್ತು ಸುಳ್ಳು ಪ್ರಚಾರಗಳ ಮೇಲೆ ನಂನಿಕೊಂಡು ನಿರಾಶರಾಗಬೇಡಿ. ತಮ್ಮ ಮೇಲೆ ಮತ್ತು ಕಾಂಗ್ರೆಸ್ ಪಕ್ಷ ಮೇಲೆ ನಂಬಿಕೆ ಇಡಿ. ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲ ಎಂದು ಧೈರ್ಯ ತುಂಬಿದ್ದಾರೆ.

ಈ ಮೊದಲು ಪ್ರೀಯಾಂಕಾ ಗಾಂಧಿ ಕೂಡ ಆಡಿಯೋ ಸಂದೇಶ ಮೂಲಕ ಕಾರ್ಯಕರ್ತರಿಗೆ ಧೈರ್ಯ್ ತುಂಬಿದ ಕಾರ್ಯ್ ಮಾಡಿದ್ದರು.

Leave a Reply

Your email address will not be published.