Video: ಮೀಸಲಾತಿಗಾಗಿ ಜೂನ್ 9 ರಿಂದ ರಾಜನಹಳ್ಳಿಯಿಂದ ಬೃಹತ್ ಪಾದಯಾತ್ರೆ: ಪ್ರಸನ್ನಾನಂದಪುರಿ ಶ್ರೀ ಮಾಹಿತಿ

ದಾವಣಗೆರೆ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪರಮಪೂಜ್ಯ ಪ್ರಸನ್ನಾನಂದಪುರಿ ಶ್ರೀ ಗಳು ಇಂದು ನಾಯಕ ಸಮಾಜದ ವಿವಿಧ ಬೇಡಿಕೆಗಳನ್ನು ಒಳಗೊಂಡಂತೆ ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಹಕ್ಕೊತ್ತಾಯಕ್ಕಾಗಿ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಿದರು.

ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುವ ಹಾಗೂ ಸಮಾಜದ ಸಂಘಟನೆಯ ದೃಷ್ಟಿಯಿಂದ ಜೂನ್ 09 ರಿಂದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಿಂದ ರಾಜಧಾನಿ ಬೆಂಗಳೂರಿನವರೆಗೆ ಐತಿಹಾಸಿಕ ಬೃಹತ್ ಪಾದಯಾತ್ರೆ ಕೈಗೊಂಡಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಈ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಕುರಿತಂತೆ ಗೋಷ್ಠಿಯಲ್ಲಿ ಮಾತನಾಡಿ ಸಮಾಜದ ನಾಯಕರು ಮತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿ ಯಶ್ವಸ್ವಿ ಮಾಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಎ.ಬಿ. ರಾಮಚಂದ್ರಪ್ಪ, ಬಿ. ವೀರಣ್ಣ, ಎಚ್.ಕೆ. ರಾಮಚಂದ್ರಪ್ಪ, ಒಬಳಪ್ಪ, ಎಇ ಇ ಜಯಪ್ಪ, ಹೊದಿಗೆರೆ ರೆಮೇಶ, ರಾಘು ದೊಡ್ದಮ್ನಿ, ಹದಡಿ ಹಾಲಪ್ಪ,ವಿನಾಯಕ ಪೈಲ್ವಾನ, ಶ್ರೀನಿವಾಸ ದಾಸರಿಯಕಪ್ಪ, ಶ್ರೀಮತಿ ವಿಜಯ ಸೇರಿದಂತೆ ಇದ್ದರು.

Leave a Reply

Your email address will not be published.