ಮತ್ತೆ ಬೆಂಗಳೂರಿನತ್ತ ರಮೇಶ ಜಾರಕಿಹೊಳಿ..!

ಬೆಳಗಾವಿ: ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ ಜಾರಕಿಹೊಳಿ ಮತ್ತೆ ಬೆಂಗಳೂರಿನತ್ತ ಧಿಡೀರ ಪ್ರಯಾಣ ಬೆಳೆಸಿದ್ದಾರೆ.

ಕೊನೆ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡಿಸಿಕೊಂಡು ಇಂದು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮಗ ಅಮರನಾಥ ಜೊತೆ ಹೊರಟು ನಿಂತ ರಮೇಶ ಜಾರಕಿಹೊಳಿ ನಡೆ ತೀವ್ರ ಕುತೂಹಲ ಮೂಡಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿ ಬೆಂಬಲಿಗರಿಗೆ ಹೊಸ ಸಂದೇಶ ತರಲು ಹೊರಟಿದ್ದೇನೆ ಎಂದು ಹೇಳಿದ ಶಾಸಕ ರಮೇಶ ಜಾರಕಿಹೊಳಿ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದರು.

ಕಾಂಗ್ರೆಸ್ ವರೀಷ್ಠ ನಾಯಕರೊಬ್ಬರ ಕರೆ ಮೆರೆಗೆ ಶಾಸಕ ರಮೇಶ ಜಾರಕಿಹೊಳಿ ಬೆಂಗಳೂರಿಗೆ ತೆರಳಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ನಿನ್ನೆಯಿಂದ ದೋಸ್ತಿ ಪಕ್ಷಗಳ ವರಿಷ್ಠರ ಟೀಕಾಪ್ರಹಾರಗಳ ನಡುವೆ ಇಂದು ಧೀಡೀರ್ ಬೆಂಗಳುರಿಗೆ ತೆರಳಿದ ರಮೇಶ ಜಾರಕಿಹೊಳಿ ನಡೆ ತೀವ್ರ ಕುತೂಹಲ ಮೂಡಿಸಿದೆ.

Leave a Reply

Your email address will not be published.