ತಾಳಿಕೋಟೆ ಪುರಸಭೆ ಚುನಾವಣೆ: ಅಣಕು ಮತದಾನ

ತಾಳಿಕೋಟೆ: ಪಟ್ಟಣದ ಪುರಸಭೆಯ ಚುನಾವಣೆಗೆ ಸಂಬಂದಿಸಿ ಬರಲಿರುವ ದಿ. 29 ರಂದು ಮತದಾನ ಪ್ರಕ್ರೀಯೇಗೆ ಸಂಬಂದಿಸಿ ರವಿವಾರರಂದು ಇವ್ಹಿಎಂ ಮಶಿನಗಳಲ್ಲಿ ಅಭ್ಯರ್ಥಿಗಳ ಭಾವ ಚಿತ್ರ ಮತ್ತು ಚಿನ್ಹೆಗಳನ್ನು ಅಳವಡಿಸುವದರೊಂದಿಗೆ ಅಭ್ಯರ್ಥಿಗಳಿಂದ ಅಣಕು ಮತದಾನ ಮಾಡಲಾಯಿತು.

ಪಟ್ಟಣದ ಎಸ್.ಕೆ.ಕಾಲೇಜ್‍ನಲ್ಲಿ ಚುನಾವಣಾಧಿಕಾರಿ ತಾಲೂಕಾ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಅವರು ಪುರಸಭೆಯ ಚುನಾವಣೆಯಲ್ಲಿ 23 ವಾರ್ಡುಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಭೆಯನ್ನು ನಡೆಸಿದ ಅವರು ಅಭ್ಯರ್ಥಿಗಳ ಸಮ್ಮುಖದಲ್ಲಿ ಇವ್ಹಿಎಂ ಮಷಿನ್ ನಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮತ್ತು ಚಿನ್ಹೆ ಅಳವಡಿಸಿ ಅವರಿಂದಲೇ ಅಣಕು ಮತದಾನ ಮಾಡಿಸುವ ಮೂಲಕ ಇವ್ಹಿಎಂ ಮಶಷಿನ್ ಗಳನ್ನು ಭದ್ರಗೊಳಿಸಿ ಸ್ಟ್ರಾಂಗ್‍ರೂಂಗೆ ಕಳುಹಿಸಲಾಯಿತು.

ಪುರಸಭೆಯ 23 ವಾರ್ಡುಗಳ ಪೈಕಿ 28 ಮತಗಟ್ಟೆಗಳನ್ನು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು ಅದರಲ್ಲಿ ವಾರ್ಡನಂ.9, 19, 20, 22 ಅವಿರೋಧವಾಗಿ ಆಯ್ಕೆಗೊಂಡಿದ್ದರಿಂದ ಇವುಗಳನ್ನು ಹೊರತು ಪಡಿಸಿ 24 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಚುನಾವಣೆಗೆ ಎಲ್ಲ ರೀತಿಯ ತಯಾರಿ ಮಾಡಲಾಗಿದೆ. ಮೇ 29 ರಂದು ಮತದಾನದ ನಡೆಯಲಿದೆ ಎಂದು ತಿಳಿಸಿದರು.

ಚುನಾವಣಾಧಿಕಾರಿ ವಿನೋದ ನಾಯಕ, ಜಿ.ವಾಯ್.ಮುರಾಳ, ಎ.ಜಿ.ಗುಜರಿ, ಸೇಕ್ಟರ್ ಆಫಿಸರ್ ಎನ್.ಆರ್.ಉಂಡಿಗೇರಿ, ಪ್ರಶಾಂತ ಶೇವಳಕರ, ಮಾಸ್ಟರ್ ಟ್ರೈನರ್ ನಾಗರಾಜ ಕ್ಷತ್ರಿ, ಅವರು ಉಪಸ್ಥಿತರಿದ್ದರು.

Leave a Reply

Your email address will not be published.